Wednesday, June 7, 2023

Latest Posts

ನಿಯಂತ್ರಣ ತಪ್ಪಿದ ಕಾರು ಬೈಕ್‌ಗಳಿಗೆ ಡಿಕ್ಕಿ: ಮೂವರು ಸಾವು

ಹೊಸದಿಗಂತ ವರದಿ, ಗದಗ :

ಕಾರಿನ ನಿಯಂತ್ರಣ ತಪ್ಪಿ ಎದುರಿಗೆ ಬಂದ ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಮೂವರು ದುರ್ಮರಣಕ್ಕಿಡಾದ ಘಟನೆ ತಾಲ್ಲೂಕಿನ ಅಡವಿ ಸೋಮಾಪುರ ಗ್ರಾಮದ ಬಳಿ ಸೋಮವಾರ ಜರುಗಿದೆ.

ತಾಲ್ಲೂಕಿನ ಸಿಂಗಟರಾಯನಕೆರೆ ಹಾಗೂ ಡೋಣಿ ತಾಂಡಾದಿಂದ ಗದುಗಿಗೆ ಹೊರಟಿದ್ದ ಎರಡು ಬೈಕ್‌ಗಳಿಗೆ ಗದಗಿನಿಂದ ಶಿರಹಟ್ಟಿಗೆ ಹೊರಟಿದ್ದ ಕಾರು ನಿಯಂತ್ರಣ ಕಳೆದುಕೊಂಡ ಕಾರು ಎರಡು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದಿದ್ದರಿಂದ ಘಟನಾ ಸ್ಥಳದಲ್ಲೇ ಇಬ್ಬರು ಹಾಗೂ ಆಸ್ಪತ್ರೆ ಸಾಗಿಸುವ ಮಾರ್ಗ ಮಧ್ಯೆ ಮತ್ತೋರ್ವ ಸಾವುನ್ನಪ್ಪಿದ್ದಾರೆ.

ಈ ಘಟನೆಯಲ್ಲಿ ಸಿಂಗಟರಾಯನಕೆರೆ ತಾಂಡಾದ ಶಿವಪ್ಪ ನಾಯಕ (50) ಡೋಣಿ ತಾಂಡಾದ ಶಿವಾನಂದ ಲಮಾಣಿ(33) ಸ್ಥಳದಲ್ಲೇ ಸಾವುನ್ನಪ್ಪಿದರೆ ಗಾಯಾಳು ಕೃಷ್ಣಪ್ಪ ಚವ್ಹಾಣ (32) ಜಿಲ್ಲಾಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟ ದುರ್ಧೈವಿಯಾಗಿದ್ದಾರೆ.
ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ನಂತರ ಕಾರು ಜಮೀನಿಗೆ ನುಗ್ಗಿದೆ. ಕಾರ್ ಸ್ಥಳದಲ್ಲೇ ಬಿಟ್ಟು ಚಾಲಕನು ನಾಪತ್ತೆಯಾಗಿದ್ದಾನೆ . ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!