ದಿನಭವಿಷ್ಯ: ಇಂದು ನಿಮಗೆ ಮಾನಸಿಕ ನೆಮ್ಮದಿ, ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ

ಮೇಷ
ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ ನಿಮಗೆ ಅನುಕೂಲ ಬೆಳವಣಿಗೆ. ಆತಂಕ ಸೃಷ್ಟಿಸಿದ್ದ ವಿಷಯ ಪರಿಹಾರ ಕಾಣುವುದು. ಕೌಟುಂಬಿಕ ನಿಶ್ಚಿಂತೆ.

ವೃಷಭ
ವೃತ್ತಿಯಲ್ಲಿ ಪ್ರತಿಕೂಲ ಸನ್ನಿವೇಶ ಎದುರಿಸುವಿರಿ. ಅದನ್ನು ಧೈರ್ಯದಿಂದ ಎದುರಿಸಿ. ಇತರರ ನೆರವಿಗೆ ಕಾಯಬೇಡಿ. ಕೌಟುಂಬಿಕ ಭಿನ್ನಮತ, ಅಶಾಂತಿ.

ಮಿಥುನ
ಆರ್ಥಿಕ ಸ್ಥಿತಿಯಲ್ಲಿ ತೃಪ್ತಿಕರ ಬೆಳವಣಿಗೆ. ಬಿಕ್ಕಟ್ಟಿನ ಸಂದರ್ಭದಲ್ಲಿ ನಿಮ್ಮ ಕೋಪ ನಿಯಂತ್ರಿಸಿ. ಇಲ್ಲವಾದರೆ ಸಂಬಂಧಕ್ಕೆ ಹಾನಿಯಾದೀತು.

ಕಟಕ
ಹರ್ಷ, ಉಲ್ಲಾಸ ತುಂಬಿದ ದಿನ ನಿಮಗೆ ಕಾದಿದೆ. ಕಾರ್ಯವೊಂದು ಸಫಲವಾಗಿ ಮುಗಿದ ಸಮಾಧಾನ. ಸಾಂಸಾರಿಕ ಸಹಕಾರ.

ಸಿಂಹ
ವೃತ್ತಿಯಲ್ಲಿ ಗುರಿ ಸಾಧನೆ. ಅದರಿಂದ ತೃಪ್ತಿ. ಆದರೆ ವೈಯಕ್ತಿಕ ಬದುಕಿನಲ್ಲಿ ಅಸಮಾಧಾನ. ವಾಗ್ವಾದ, ಸಂಘರ್ಷ ಉಂಟಾದೀತು. ನೆಮ್ಮದಿ ಕೆಡಬಹುದು.

ಕನ್ಯಾ
ವೃತ್ತಿಯಲ್ಲಿ ಜನಪ್ರಿಯತೆ ಗಳಿಸುವಿರಿ. ನಿಮ್ಮ ಸಾಧನೆಗೆ ಮೆಚ್ಚುಗೆ. ಮನಸ್ಸಿನ ಬೇಸರ ಕಳೆಯುವ ಬೆಳವಣಿಗೆ ಸಂಭವಿಸುವುದು. ಸ್ನೇಹಿತರ ಭೇಟಿ.

ತುಲಾ
ಅದೃಷ್ಟ ನಿಮ್ಮೊಂದಿಗಿದೆ. ವ್ಯವಹಾರದಲ್ಲಿ ಯಶ. ವೃತ್ತಿಯಲ್ಲಿ ಉನ್ನತಿ. ಪ್ರೀತಿಯಲ್ಲಿ ಅಪಸ್ವರ ಸಂಭವ.  ಸಣ್ಣ ಕಾರಣಕ್ಕಾಗಿ ಸಂಬಂಧ ಕೆಡಿಸಿಕೊಳ್ಳದಿರಿ.

ವೃಶ್ಚಿಕ
ನಿಮ್ಮ ಯಶಸ್ಸಿಗೆ ಇಂದು ಯಾವುದೇ ಅಡ್ಡಿ ಬರದು. ವೃತ್ತಿ, ಹಣದ ವಿಚಾರದಲ್ಲಿ ಯಶಸ್ಸು. ಖಾಸಗಿ ಬದುಕಿನ ಸಮಸ್ಯೆಯನ್ನು ವೃತ್ತಿಗೆ ಎಳೆದು ತರಬೇಡಿ.

ಧನು
ವೃತ್ತಿಯಲ್ಲಿ ಉತ್ಸಾಹ. ಖರ್ಚು ನಿಯಂತ್ರಣಕ್ಕೆ ಗಮನ ಕೊಡಿ. ವಾಹನ ಚಾಲನೆಯಲ್ಲಿ ತುಸು ಎಚ್ಚರ ವಹಿಸಿ. ಕೌಟುಂಬಿಕ ಸಮಸ್ಯೆ ಪರಿಹಾರ ಕಾಣುವುದು.

ಮಕರ
ವೃತ್ತಿಯಲ್ಲೂ, ಖಾಸಗಿ ಬದುಕಲ್ಲೂ ನಿಮಗೆ ಅನುಕೂಲಕರ ಬೆಳವಣಿಗೆ. ಸಂಶಯಾಸ್ಪದ ಕ್ಷೇತ್ರದಲ್ಲಿ ಹಣ ಹೂಡದಿರಿ. ಎಚ್ಚರದಿಂದ ನಡಕೊಳ್ಳಿ.

ಕುಂಭ
ಉದ್ಯೋಗದಲ್ಲಿ  ನೀವು ಬಯಸಿದ ಪ್ರಗತಿ. ಹಣದ ಹೂಡಿಕೆ ಉತ್ತಮ ಫಲ ನೀಡುವುದು. ಸಹೋದ್ಯೋಗಿಯ ಜತೆ ವಿರಸ ಉಂಟಾದೀತು. ವಾಗ್ವಾದ ನಡೆಸದಿರಿ.

ಮೀನ
ನಿಮ್ಮ ವರ್ತನೆಯಲ್ಲಿ  ಸ್ವಲ್ಪ ಬದಲಾವಣೆ ಮಾಡಿಕೊಳ್ಳಿ. ಅದರಿಂದ ಕೆಲವಾರು ಸಮಸ್ಯೆ ಪರಿಹಾರ ಕಾಣುವುದು. ಸಂಬಂಧ ಸುಧಾರಿಸುವುದು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!