ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೇಂದ್ರ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಿಂದುಗಳ ಕುರಿತು ಇತ್ತೀಚೆಗೆ ನೀಡಿದ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಸಂಸತ್‌ನಲ್ಲಿ ರಾಹುಲ್ ಗಾಂಧಿ ಹೇಳಿಕೆಯನ್ನು ಖಂಡಿಸಿದ್ದಾರೆ.
ಇದರ ಬೆನ್ನಲ್ಲೇ, ಹಿಂದುಗಳ ಕುರಿತು ರಾಹುಲ್ ಗಾಂಧಿ ನೀಡಿದ ಹೇಳಿಕೆಯನ್ನು ಖಂಡಿಸಿ ಮಹಾರಾಷ್ಟ್ರದ ದೇಗುಲದ ಡೋರ್ ಮ್ಯಾಟ್‌ಗೆ ರಾಹುಲ್ ಗಾಂಧಿ ಅವರ ಫೋಟೊವನ್ನು ಅಳವಡಿಸಲಾಗಿದೆ. ಈ ವಿಡಿಯೊ ಈಗ ವೈರಲ್ ಆಗಿದೆ.
ಹಿಂದುಗಳ ಕುರಿತು ರಾಹುಲ್ ಗಾಂಧಿ ಅವರ ಹೇಳಿಕೆಯನ್ನು ಖಂಡಿಸಿ ದೇವಾಲಯದ ಆಡಳಿತ ಮಂಡಳಿಯು ಡೋರ್‌ಮ್ಯಾಟ್‌ಗೆ ರಾಹುಲ್ ಗಾಂಧಿ ಅವರ ಫೋಟೊವನ್ನು ಅಳವಡಿಸಿದೆ. ದೇಗುಲಕ್ಕೆ ತೆರಳುವ ಭಕ್ತರು ರಾಹುಲ್ ಗಾಂಧಿ ಅವರ ಫೋಟೊ ಇರುವ ಡೋರ್‌ಮ್ಯಾಟ್‌ಅನ್ನು ತುಳಿದುಕೊಂಡು ಹೋಗುತ್ತಿದ್ದಾರೆ. ಅಷ್ಟೇ ಅಲ್ಲ, ಡೋರ್ ಮ್ಯಾಟ್ ಮೇಲೆ,’ಹಿಂದುಗಳನ್ನು ಹಿಂಸಾವಾದಿಗಳು ಎಂಬುದಾಗಿ ಕರೆಯಲು ನಿಮಗೆ ಎಷ್ಟು ಧೈರ್ಯ’ ಎಂದು ಕೂಡ ಬರೆಯಲಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೊ ವೈರಲ್ ಆಗುತ್ತಲೇ ಪರ-ವಿರೋಧ ಚರ್ಚೆಯಾಗುತ್ತಿದೆ.