ಹೊಸದಿಗಂತ ಡಿಜಿಟಲ್ ಡೆಸ್ಕ್:
ಪ್ರಧಾನ ಮಂತ್ರಿ ಗ್ರಾಮ ಸಡಕ್ ಯೋಜನೆ (ಪಿಎಂಜಿಎಸ್ ವೈ) ಯಡಿಯಲ್ಲಿ ಬರೋಬ್ಬರಿ 6,84,994 ಕಿ.ಮೀ ನ 1,66,798 ಗ್ರಾಮೀಣ ರಸ್ತೆಗಳು ನಿರ್ಮಾಣಗೊಂಡಿವೆ ಎಂದು ಸರ್ಕಾರ ತಿಳಿಸಿದೆ.
ಈ ಬಗ್ಗೆ 2021-2022ರ ವಾರ್ಷಿಕ ಸಮೀಕ್ಷಾ ವರದಿಯಲ್ಲಿ ಮಾಹಿತಿ ಬಹಿರಂಗಗೊಂಡಿದೆ. ಪಿಎಂಜಿಎಸ್ ವೈ ಯೋಜನೆಯಲ್ಲಿ 6,404 ಸೇತುವೆಗಳು ನಿರ್ಮಾಣಗೊಂಡಿವೆ.
ಇನ್ನುಳಿದಂತೆ 7,82,844 ಕಿ.ಮೀ ನ ಒಟ್ಟು 1,82,506 ರಸ್ತೆಗಳು ಹಾಗೂ 9,456 ಸೇತುವೆಗಳು ಮಂಜೂರಾಗಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆ ಅಡಿಯಲ್ಲಿ 2021-2022ನೇ ಸಾಲಿನಲ್ಲಿ 2.63 ಕೋಟಿ ಮನೆಗಳ ನಿರ್ಮಾಣದ ಗುರಿಯಲ್ಲಿ ಈಗಾಗಲೇ 2.17 ಕೋಟಿ ಮನೆಗಳನ್ನು ಮಂಜೂರು ಮಾಡಿದ್ದು, 1.69 ಕೋಟಿ ಮನೆ ನಿರ್ಮಾಣ ಪೂರ್ಣಗೊಂಡಿದೆ.
ಪ್ರಧಾನ ಮಂತ್ರಿ ಅವಾಸ್ ಯೋಜನೆ ಅಡಿಯಲ್ಲಿ 4,46,058 ಭೂಮಿ ರಹಿತ ಫಲಾನುಭವಿಗಳನ್ನು ಗುರುತಿಸಿ 2,05,847 (ಶೇ.46ರಷ್ಟು) ಜನರಿಗೆ ಭೂಮಿ ಒದಗಿಸಲಾಗಿದೆ ಎಂದು ತಿಳಿಸಿದೆ.