ಈ ಬಾರಿ ಮೊಬೈಲ್‌ನಲ್ಲೇ ವೀಕ್ಷಿಸಿ ಕೇಂದ್ರ ಬಜೆಟ್ 2022

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿಯೂ ಡಿಜಿಟಲ್ ಬಜೆಟ್ ಮಂಡನೆಯಾಗಲಿದ್ದು, ಜನಸಾಮಾನ್ಯರಿಗೆ ಬಜೆಟ್ ಮಾಹಿತಿ ಪಡೆಯಲು ಅನುಕೂಲವಾಗುವಂತೆ ಸರ್ಕಾರ ಆಪ್ (Application) ಬಿಡುಗಡೆ ಮಾಡಿದೆ.

ಬಜೆಟ್ ಮಂಡನೆ ಬಗ್ಗೆ ಮನೆಯಲ್ಲಿಯೇ ಕುಳಿತು ಸಾರ್ವಜನಿಕರು ಎಲ್ಲ ಮಾಹಿತಿ ಪಡೆಯಬಹುದು. ಸರ್ಕಾರದಿಂದ ಯೂನಿಯನ್ ಬಜೆಟ್ ಹೆಸರಿನ ಆಪ್ ಬಿಡುಗಡೆಯಾಗಿದ್ದು, ಇಂಗ್ಲಿಷ್ ಹಾಗೂ ಹಿಂದಿ ಭಾಷೆಯಲ್ಲಿ ಮಾಹಿತಿ ಲಭ್ಯವಿದೆ. ಸಂಪೂರ್ಣ ಬಜೆಟ್ ವೀಕ್ಷಣೆಗೆ ಇಲ್ಲಿ ಅವಕಾಶವಿದೆ. ಬಜೆಟ್ ಮಂಡನೆ ಬಳಿಕ ಆಪ್ ಮೂಲಕ ಜನರು ತಮ್ಮ ಮೊಬೈಲ್‌ನಲ್ಲೇ, ತಮ್ಮದೇ ಭಾಷೆಯಲ್ಲಿ ಮಾಹಿತಿ ಪಡೆಯಬಹುದಾಗಿದೆ. ಈ ಬಾರಿ ಬಜೆಟ್ ಜನರಿಗೆ ಸುಲಭವಾಗಿ ತಲುಪಲಿ ಎನ್ನುವ ಕಾರಣಕ್ಕೆ ಸರ್ಕಾರ ಈ ಸೌಲಭ್ಯ ಒದಗಿಸಿದೆ.

ಬಳಕೆದಾರರು http://indiabudget.gov.in ನಿಂದ ಆಪ್ ಡೌನ್ಲೋಡ್ ಮಾಡಬಹುದು. ಅಥವಾ ಪ್ಲೇ ಸ್ಟೋರ್‌ನಿಂದಲೂ ಆಪ್ ಡೌನ್‌ಲೋಡ್ ಮಾಡಬಹುದು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!