ಯುಪಿ, ತಮಿಳುನಾಡು ರಕ್ಷಣಾ ಕಾರಿಡಾರ್‌ಗಳಲ್ಲಿ 24,000 ಕೋಟಿ ರೂಪಾಯಿ ಹೂಡಿಕೆ ಮಾಡಲಿವೆ 150ಕ್ಕೂ ಹೆಚ್ಚು ಸಂಸ್ಥೆಗಳು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ರಕ್ಷಣಾ ಕ್ಷೇತ್ರದಲ್ಲಿ ಸ್ವಾವಲಂಬನೆಯನ್ನು ಸಾಧಿಸುವ ಹಾಗೂ ರಕ್ಷಣಾ ಪೂರೈಕೆದಾರನಾಗುವ ಗುರಿಯೊಂದಿಗೆ ಭಾರತದ ಸರ್ಕಾರವು ಉತ್ತರ ಪ್ರದೇಶದಲ್ಲಿ ಮತ್ತು ತಮಿಳುನಾಡಿನಲ್ಲಿ ಎರಡು ರಾಜ್ಯಗಳಲ್ಲಿ ರಕ್ಷಣಾ ಕಾರಿಡಾರ್‌ ಸ್ಥಾಪಿಸಿದೆ. ದೇಶದ ಎರಡು ರಕ್ಷಣಾ ಕಾರಿಡಾರ್‌ಗಳು ಸುಮಾರು 150 ಕಂಪನಿಗಳಿಂದ ಸುಮಾರು 24,000 ಕೋಟಿ ರೂಪಾಯಿಗಳ ಹೂಡಿಕೆ ಪ್ರಸ್ತಾವನೆಗಳನ್ನು ಸ್ವೀಕರಿಸಿವೆ.ನಉತ್ತರ ಪ್ರದೇಶ ರಕ್ಷಣಾ ಕೈಗಾರಿಕಾ ಕಾರಿಡಾರ್ (UPDIC) ಅಭಿವೃದ್ಧಿಪಡಿಸಲು ಆಗ್ರಾ, ಅಲಿಗಢ, ಚಿತ್ರಕೂಟ, ಝಾನ್ಸಿ, ಕಾನ್ಪುರ ಮತ್ತು ಲಕ್ನೋ ಈ ಆರು ಪ್ರದೇಶಗಳನ್ನು ಗುರುತಿಸಲಾಗಿದೆ. ಅದೇ ರೀತಿ, ತಮಿಳುನಾಡು ಡಿಫೆನ್ಸ್ ಇಂಡಸ್ಟ್ರಿಯಲ್ ಕಾರಿಡಾರ್ (ಟಿಎನ್‌ಡಿಐಸಿ) ಅಭಿವೃದ್ಧಿಪಡಿಸಲು ಚೆನ್ನೈ, ಕೊಯಮತ್ತೂರು, ಹೊಸೂರು, ಸೇಲಂ ಮತ್ತು ತಿರುಚಿರಾಪಳ್ಳಿ ಪ್ರದೇಶಗಳನ್ನು ಗುರುತಿಸಲಾಗಿದೆ ಎಂದು ಸರ್ಕಾರವು ಸಂಸತ್ತಿನಲ್ಲಿ ತಿಳಿಸಿದೆ.

“ಯುಪಿಡಿಐಸಿಗಾಗಿ ಉತ್ತರ ಪ್ರದೇಶ ಸರ್ಕಾರದಿಂದ ಪಡೆದ ಮಾಹಿತಿಯ ಪ್ರಕಾರ, 12,139 ಕೋಟಿ ರೂಪಾಯಿಗಳ ಸಂಭಾವ್ಯ ಹೂಡಿಕೆಯ ಉದ್ಯಮಗಳು ಇತ್ಯಾದಿಗಳೊಂದಿಗೆ 105 ತಿಳುವಳಿಕೆ ಪತ್ರಗಳಿಗೆ (ಎಂಒಯು) ಸಹಿ ಹಾಕಲಾಗಿದೆ” ಎಂದು ಕೇಂದ್ರ ರಕ್ಷಣಾ ಖಾತೆ ರಾಜ್ಯ ಸಚಿವ ಅಜಯ್ ಭಟ್ ಅವರು ರಾಜ್ಯಸಭೆಯಲ್ಲಿ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಯುಪಿಡಿಐಸಿಯಲ್ಲಿ ಈಗಾಗಲೇ 2,422 ಕೋಟಿ ರೂಪಾಯಿ ಹೂಡಿಕೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ. ಯುಪಿಡಿಐಸಿ ಅಭಿವೃದ್ಧಿಗಾಗಿ ಒಟ್ಟು 1,608 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ” ಎಂದು ಸಚಿವರು ಹೇಳಿದ್ದಾರೆ.

“ಇದಲ್ಲದೆ, TNDIC ಗಾಗಿ ತಮಿಳುನಾಡು ಸರ್ಕಾರದಿಂದ ಪಡೆದ ಮಾಹಿತಿಯ ಪ್ರಕಾರ, 53 ಕೈಗಾರಿಕೆಗಳಿಂದ 11,794 ಕೋಟಿ ರೂಪಾಯಿಗಳ ಸಂಭಾವ್ಯ ಹೂಡಿಕೆಗಾಗಿ ತಿಳುವಳಿಕೆ ಒಪ್ಪಂದ (ಎಂಒಯು) ಇತ್ಯಾದಿಗಳ ಮೂಲಕ ವ್ಯವಸ್ಥೆ ಮಾಡಲಾಗಿದೆ. ಟಿಎನ್‌ಡಿಐಸಿ ಅಭಿವೃದ್ಧಿಗಾಗಿ ಒಟ್ಟು 910 ಹೆಕ್ಟೇರ್ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ ಈಗಾಗಲೇ TNDIC ನಲ್ಲಿ 3,847 ಕೋಟಿ ರೂ. ಹೂಡಿಕೆ ಮಾಡಲಾಗಿದೆ” ಎಂದು ಅವರು ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!