ವಿನಾಯಕ ಚತುರ್ಥಿ: ಪುಣೆಯ ಗಣಪತಿ ದೇವಸ್ಥಾನದಲ್ಲಿ 35,000ಕ್ಕೂ ಹೆಚ್ಚು ಮಹಿಳೆಯರಿಂದ ಪ್ರಾರ್ಥನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ನಡೆಯುತ್ತಿರುವ ಗಣಪತಿ ಮಹೋತ್ಸವದ ಎರಡನೇ ದಿನದಂದು, ಪುಣೆಯ ದಗದುಶೇತ್ ಹಲ್ವಾಯಿ ಗಣಪತಿ ದೇವಸ್ಥಾನದ ಆವರಣದಲ್ಲಿ 35,000 ಕ್ಕೂ ಹೆಚ್ಚು ಮಹಿಳೆಯರು ಗಣಪತಿ ‘ಅಥರ್ವಶೀರ್ಷ’ ಪ್ರಾರ್ಥನೆಯನ್ನು ಪಠಿಸಿದರು. ಬುಧವಾರ ಬೆಳ್ಳಂಬೆಳಗ್ಗೆ ದೇವಾಲಯ ಆವರಣ ಪವಿತ್ರ ಪ್ರಾರ್ಥನೆಗಳೊಂದಿಗೆ ಪ್ರತಿಧ್ವನಿಸಿತು.

ಶ್ರೀಮಂತ್ ದಗದುಶೇತ್ ಹಲವಾಯಿ ಗಣಪತಿ ದೇವಸ್ಥಾನ ಟ್ರಸ್ಟ್ ವತಿಯಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಪ್ರಾರ್ಥನೆಗೆ ಸಾಕ್ಷಿಯಾಗಲು ರಷ್ಯಾದ ಪ್ರಜೆಗಳ ಗುಂಪನ್ನು ಅತಿಥಿಗಳಾಗಿ ಆಹ್ವಾನಿಸಲಾಯಿತು. ಸಾಂಪ್ರದಾಯಿಕ ಪ್ರಾರ್ಥನೆಯಲ್ಲಿ ಭಾಗವಹಿಸಲು, ನಗರದಾದ್ಯಂತ ಮಹಿಳೆಯರು ಸಾಂಪ್ರದಾಯಿಕ ಉಡುಗೆಯಲ್ಲಿ ಬಂದಿದ್ದರು.

10 ದಿನಗಳ ಉತ್ಸವವು ಸಂಗೀತ ಮತ್ತು ಸಮೂಹ ಪಠಣದೊಂದಿಗೆ ಸಾರ್ವಜನಿಕ ಮೆರವಣಿಗೆಯಲ್ಲಿ ಅನಂತ ಚತುರ್ದಶಿಯ ದಿನದಂದು ವಿಸರ್ಜನೆ ಮಾಡಲಾಗುತ್ತದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!