September 13, 2026
Sunday, September 13, 2026
spot_img

ಬೆಂಗಳೂರಿನ ಪ್ರತಿಷ್ಠಿತ ಶಾಲೆಯ 500 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನಾರೋಗ್ಯ, ಸ್ಕೂಲ್‌ ಕ್ಲೋಸ್‌

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ರಾಜಧಾನಿ ಬೆಂಗಳೂರಿನ ಪ್ರತಿಷ್ಠಿತ ಶಾಲೆಯೊಂದರಲ್ಲಿ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳು ಅನಾರೋಗ್ಯಕ್ಕೆ ಒಳಗಾಗಿದ್ದು, ಇಡೀ ಶಾಲೆಗೆ ಬೀಗ ಹಾಕಲಾಗಿದೆ.

ರಿಚರ್ಡ್ಸ್‌ ಟೌನ್‌ ಬಳಿ ಇರುವ ಕ್ಲಾರೆನ್ಸ್‌ ಶಾಲೆಯಲ್ಲಿ ಓದುತ್ತಿರುವ ಐನೂರಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಅನಾರೋಗ್ಯ ಉಂಟಾಗಿದೆ. ಇದರಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ H1N1 ಫ್ಲೂ ದೃಡಪಟ್ಟಿದ್ದು, ಮತ್ತಷ್ಟು ಆತಂಕ ಹೆಚ್ಚಿದೆ. ಇದ್ದಕ್ಕಿದ್ದಂತೆಯೇ ಮಕ್ಕಳು ಅನಾರೋಗ್ಯಕ್ಕೆ ಈಡಾಗುತ್ತಿರುವುದನ್ನು ಅರಿತ ಶಾಲೆ, ವಿದ್ಯಾರ್ಥಿಗಳ ಸುರಕ್ಷತೆಗಾಗಿ ಇಡೀ ಶಾಲೆಯನ್ನೇ ಬಂದ್‌ ಮಾಡಿದ್ದಾರೆ.

ಆಗಸ್ಟ್‌ 18 ರ ವರೆಗೆ ಶಾಲೆ ಬಂದ್‌

ಮಕ್ಕಳಿಗೆ ಇದ್ದಕ್ಕಿದ್ದಂತೆಯೇ ಕೆಮ್ಮು ಶೀತ ಜ್ವರ ಕಾಣಿಸಿಕೊಂಡಿದ್ದು, ಇತರ ಮಕ್ಕಳಿಗೆ ವೈರಸ್‌ ಹರಡಬಾರದು ಎಂದು ಶಾಲೆಯನ್ನು ಆಗಸ್ಟ್‌ 8 ರ ವರೆಗೆ ಬಂದ್‌ ಮಾಡಲಾಗಿದೆ. ಈ ಅವಧಿಯಲ್ಲಿ ಶಾಲೆಯನ್ನು ಸ್ಯಾನಿಟೈಸ್‌ ಮಾಡಲಾಗುತ್ತಿದೆ.

ಎಲ್ಲ ಮಕ್ಕಳಿಗೂ ಕೆಮ್ಮು ಜ್ವರ

ಅನಾರೋಗ್ಯಕ್ಕೆ ತುತ್ತಾಗಿರುವ ಐನೂರಕ್ಕೂ ಹೆಚ್ಚು ಮಕ್ಕಳಲ್ಲಿ ಒಂದೇ ರೀತಿಯ ಲಕ್ಷಣಗಳು ಕಾಣಿಸಿವೆ. ಎಲ್ಲ ಮಕ್ಕಳಿಗೂ ಕೆಮ್ಮು, ಶೀತ ಹಾಗೂ ಜ್ವರ ಬಾಧಿಸಿದೆ. ಇನ್ನು ಶಾಲೆಯ ಸುತ್ತ ಮುತ್ತ ಇರುವ ಅನಧಿಕೃತ ಅಂಗಡಿಗಳ ತೆರವಿಗೆ ಆಗ್ರಹಿಸಲಾಗಿದೆ.

ಜಂಕ್‌ ಫುಡ್‌ ತಿಂದು ಹೀಗಾಗಿದೆ ಎಂದ ಶಾಲೆ

ನಮ್ಮ ಶಾಲೆಯ ಸುತ್ತಮುತ್ತ ಸಾಕಷ್ಟು ಜಂಕ್‌ ಫುಡ್‌ ಸಿಗುತ್ತದೆ. ಇದನ್ನು ಮಕ್ಕಳು ನಿತ್ಯವೂ ಸೇವಿಸುತ್ತಾರೆ. ಮನೆಗೆ ತೆರಳುವಾಗ ತಿನ್ನುತ್ತಲೇ ರಸ್ತೆಯಲ್ಲಿ ಹೋಗುತ್ತಾರೆ. ಇದರ ಜೊತೆಗೆ ಶಾಲೆಯ ಗೇಟ್‌ ಪಕ್ಕದಲ್ಲೇ ಜನ ಕಸ ಸುರಿಯುತ್ತಿದ್ದಾರೆ. ಇದರಿಂದ ನಮ್ಮ ಮಕ್ಕಳ ಆರೋಗ್ಯಕ್ಕೆ ಹಾನಿಯಾಗಿದೆ. ಇದನ್ನು ಈಗಲೇ ತೆರವು ಮಾಡಬೇಕು ಎಂದು ಶಾಲೆಯ ಆಡಳಿತ ಮಂಡಳಿ ಮನವಿ ಮಾಡಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !