ಸಂಗೀತ ಕಾರ್ಯಕ್ರಮದಲ್ಲಿ ನೂಕುನುಗ್ಗಲು: ಕಾಲ್ತುಳಿತಕ್ಕೆ ಸಿಲುಕಿ 11 ಜನರು ಸಾವು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕಾಂಗೋ ಪ್ರಜಾಸತ್ತಾತ್ಮಕ ಗಣರಾಜ್ಯದ ಕಿನ್ಶಾಸಾದಲ್ಲಿರುವ ಹುತಾತ್ಮರ ಕ್ರೀಡಾಂಗಣದಲ್ಲಿ ಕಾಂಗೋಲೀಸ್ ಗಾಯಕ ಫಾಲಿ ಇಪುಪಾ ಅವರ ಸಂಗೀತ ಕಾರ್ಯಕ್ರಮದ ವೇಳೆ ನೂಕುನುಗ್ಗಲು ಸಂಭವಿಸಿದ್ದು, 11 ಜನರು ಬಲಿಯಾಗಿದ್ದಾರೆ.
ಡೆಮಾಕ್ರಟಿಕ್ ರಿಪಬ್ಲಿಕ್ ಆಫ್ ಕಾಂಗೋ, ಯುರೋಪ್ ಮತ್ತು ಇತರೆಡೆಗಳಲ್ಲಿ ಅಪಾರ ಅಭಿಮಾನಿಗಳನ್ನು ಗಳಿಸಿರುವ ಕಿನ್ಶಾಸಾ ಮೂಲದ ಇಪುಪಾ ಅವರ ಸಂಗೀತ ಕಾರ್ಯಕ್ರಮಕ್ಕೆ ಮುಂಚಿತವಾಗಿ ಅನೇಕರು ಜಮಾಯಿಸಿದ್ದರು. ಕ್ರೀಡಾಂಗಣದಲ್ಲಿ 80,000 ಜನರು ಭಾಗಿಯಾಗಲು ಅವಕಾಶವಿತ್ತು. ಆದರೆ ಸ್ಟೇಡಿಯಂನೊಳಗೆ ಹಾಜರಿದ್ದವರ ಸಂಖ್ಯೆಯು ಪೊಲೀಸ್ ಸಿಬ್ಬಂದಿ ನಿಯಂತ್ರಿಸಬಹುದಾದ ಸಂಖ್ಯೆಯನ್ನು ಮೀರಿತ್ತು. ಈ ವೇಳೆ  ಕ್ರೀಡಾಂಗಣದ ಹೊರಗಿನ ಬೀದಿಗಳಲ್ಲಿ ಕಿಕ್ಕಿರಿದು ನೆರೆದಿದ್ದ ಜನಸಂದಣಿಯನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಪ್ರಯೋಗಿಸಿದವು. ಈ ವೇಳೆ ಸಂಭವಿಸಿದ ಗೊಂದಲದಲ್ಲಿ 11 ಜನರು ಬಲಿಯಾಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!