ಹೊಸದಿಗಂತ ಡಿಜಿಟಲ್ ಡೆಸ್ಕ್:
ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಜನ್ಮದಿನ ಹಾಗೂ ರಾಜ್ಯಪಾಲರ ವಿಚಾರದಲ್ಲಿ ಪಕ್ಷದ ಕಾನೂನು ವಿಜಯವನ್ನು ಆಚರಿಸಲು ಮೈಲಾಡುತುರೈನಲ್ಲಿ ಡಿಎಂಕೆ ಹಮ್ಮಿಕೊಂಡಿದ್ದ ಸಾರ್ವಜನಿಕ ಸಭೆಯ ವೇದಿಕೆಯಲ್ಲಿ ನಡೆದ ಭಾರೀ ಅನಾಹುತ ಸಂಭವಿಸಿದ್ದು, ಡಿಎಂಕೆ ಸಂಸದ ಎ. ರಾಜಾ ಕೂದಲೆಳೆ ಅಂತರದಲ್ಲಿ ಅಪಾಯದಿಂದ ಪಾರಾಗಿದ್ದಾರೆ.
ಈ ಕಾರ್ಯಕ್ರಮದಲ್ಲಿ ರಾಜಾ, ವೇದಿಕೆಯಲ್ಲಿ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಈ ವೇಳೆ ಜೋರಾಗಿ ಗಾಳಿ ಬೀಸಿದ್ದು, ವೇದಿಕೆಯ ಬಳಿಯಲ್ಲಿದ್ದ ಓವರ್‌ಹೆಡ್ ಫೋಕಸ್ ದೀಪಗಳು ಕುಸಿದು ಬಿದ್ದಿವೆ. ಈ ವೇಳೆ ರಾಜಾ ತಕ್ಷಣವೇ ಎಡಗಡೆ ಸರಿದ ಪರಿಣಾಮ ಭಾರೀ ಅಪಾಯದಿಂದ ಪಾರಾಗಿದ್ದಾರೆ. ಓವರ್‌ಹೆಡ್ ಫೋಕಸ್ ದೀಪಗಳು ಕುಸಿದು ಡಯಾಜ್ ಮೇಲೆ ಬೀಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.