ಜನರೇ ನಾಚುವಂತಿದೆ ಗೂಬೆಗಳ ಪ್ರೀ ವೆಡ್ಡಿಂಗ್ ಫೋಟೊಶೂಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಮದುವೆ ಫೋಟೊಗಳು ಹೇಗಿದ್ದರೂ ಪರವಾಗಿಲ್ಲ ಈಗೆಲ್ಲಾ ಪ್ರೀ ವೆಡ್ಡಿಂಗ್ ಫೋಟೊಗಳು ಚೆನ್ನಾಗಿ ಬಂದ್ರೆ ಸಾಕು ಎನ್ನುವಂತಾಗಿದೆ.
ಪ್ರೀ ವೆಡ್ಡಿಂಗ್‌ಗಾಗಿ ಟ್ರಿಪ್ ಹೋಗೋದು, ಸಮುದ್ರದ ಬಳಿ, ಕಾಡಿನಲ್ಲಿ, ರೋಡಿನಲ್ಲಿ ಎಲ್ಲಿ ಬೇಕೆಂದರಲ್ಲಿ ಕಪಲ್‌ಗಳು ಶೂಟ್ ಮಾಡಿಸಿಕೊಳ್ಳುತ್ತಿದ್ದಾರೆ.
ಬರೀ ಮನುಷ್ಯರೇ ಯಾಕೆ ಪ್ರೀ ವೆಡ್ಡಿಂಗ್ ಶೂಟ್ ಮಾಡಿಸಬೇಕು, ನಾವು ಮಾಡಿಸ್ತೀವಿ ಅಂತ ಇಲ್ಲಿ ಎರಡು ಗೂಬೆಗಳು ತಯಾರಾಗಿ ನಿಂತಿವೆ. ಇವುಗಳ ಫೋಟೊ ನೋಡಿದರೆ ಇದು ಪಕ್ಕಾ ಪ್ರೀ ವೆಡ್ಡಿಂಗ್ ಶೂಟ್ ಎನ್ನುವಂತೆಯೇ ಕಾಣುತ್ತದೆ.

Imageಮಹಾರಾಷ್ಟ್ರದಲ್ಲಿ ಗೂಬೆಗಳು ಈ ರೀತಿ ರೊಮ್ಯಾಂಟಿಕ್ ಆಗಿ ಕಾಣಿಸಿದ್ದು, ಇವುಗಳ ಫೋಟೊವನ್ನು ಅಶ್ವಿನ್ ಕೆಂಕೆರೆ ಕ್ಲಿಕ್ಕಿಸಿದ್ದಾರೆ. ಸದ್ಯ ಈ ಫೋಟೊಗಳು ಎಲ್ಲೆಡೆ ವೈರಲ್ ಆಗಿದ್ದು, ಫೋಟೊಶೂಟ್ ಮಾಡಿಸುವ ಕಪಲ್‌ಗಳ ಹೊಸ ಪೋಸಿಂಗ್ ಐಡಿಯಾ ಸಿಕ್ಕಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!