Friday, December 9, 2022

Latest Posts

ವಿಷ ಪ್ರಾಶನದಿಂದ ಸಾಯುತ್ತಿರುವ ಎತ್ತು,ಆಕಳುಗಳು

ಹೊಸದಿಗಂತ ವರದಿ,ಜೊಯಿಡಾ:

ಧನಗಳ ಪೂಜಿಸುವ ದಿಪಾವಳಿಯ ದಿನದಂದೆ ವಿಷ ಪ್ರಾಶನದಿಂದ 3 ಸಾಕು ದನಗಳು ಸತ್ತು ಉಳಿದ 7 ಧನಗಳು ವಿಷ ಬೆರೆಸಿದ ಅಕ್ಕಿ ತಿಂದಿರುವ ಕಾರಣ ಅಸ್ವಸ್ಥವಾದ ಬಗ್ಗೆ ಜೊಯಿಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಜೊಯಿಡಾ ತಾಲೂಕಿನ ನಾಗೋಡಾ ಗ್ರಾಮ ಪಂಚಾಯತ ವ್ಯಾಪ್ತಿಯ ಕೆಕೊರ್ಡಾದಲ್ಲಿ ಈ ಘಟನೆ ನಡೆದಿದ್ದು, ಮಮತಾ ಕೊಂ ಮಹಾಬಲೇಶ್ವರ ಗಾಳಕರ ಇವರು ಪೊಲೀಸ್ ಠಾಣೆಗೆ ದೂರು ನಿಡಿದಂತೆ ಪ್ರತಿ ದಿನ ಹುಲ್ಲು ಮೇಯಲು ಹೊಗುವ ಇವರ ಒಂದು ಎತ್ತು ಅನಂತ ನರಶಿಂಹ ಬಾಗ್ವತ್ ಇವರ ತೋಟದಲ್ಲಿ ಸತ್ತಿರುವುದು ಕಂಡಿದೆ. ಮತ್ತು ಒಂದು ಎತ್ತು ಮತ್ತು 3 ಆಕಳು ಅಸ್ವಸ್ಥತೆಯಿಂದ ಬಿದ್ದಿರುವುದು ಕಂಡಿದೆ, ಮತ್ತೆ ಇಲ್ಲಿಯೆ ಭಾರತಿ ಕೊಂ ವಿಠೋಬಾ ಗಾವಡಾ ಸಾಂಗವೆ ಇವರ ಎರಡು ಧನಗಳು ಸತ್ತಿರುವುದು ಮತ್ತು ಎರಡು ಆಕಳು ಒಂದು ಎತ್ತು ಅಸ್ವಸ್ಥತೆಯಿಂದ ಮನೆಗೆ ಬಂದಿರುವುದು ತಿಳಿದಿರುತ್ತದೆ. ತೊಟದಲ್ಲಿ ಧನಗಳನ್ನು ಹುಡುಕುತ್ತಿರುವಾಗ ಪ್ಲಾಸ್ಟಿಕ್ ಚೀಲದಲ್ಲಿ ಯಾವುದೋ ವಿಷ ಬೇರೆಸಿದ ಅಕ್ಕಿ ಕಂಡುಬಂದಿರುತ್ತದೆ. ಇದೆ ವಿಷ ಬೆರೆಸಿದ ಅಕ್ಕಿ ತಿಂದು ಎತ್ತು ,ಆಕಳು ಸತ್ತಿರುವ ಕಾರಣ ಒಟ್ಟೂ 50 ಸಾವಿರ ನಮಗೆ ಹಾನಿ ಉಂಟಾಗಿರುತ್ತದೆ. ಈ ಬಗ್ಗೆ ಕ್ರಮ ಕೈಗೊಳ್ಳುವಂತೆ ದೂರಿನಲ್ಲಿ ತಿಳಿಸಲಾಗಿದೆ. ಸ್ಥಳಕ್ಕೆ ಜೊಯಿಡಾ ಪಶು ವೈಧ್ಯಾಧಿಕಾರಿ ಡಾ: ಮಂಜಪ್ಪ ಟಿ ಎಸ್ ಮತ್ತು ಡಾ: ಪ್ರದೀಪ ಮರಣೋತ್ತರ ಪರಿಕ್ಷೆ ನಡೆಸಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!