“ಕಾಂಗ್ರೆಸ್ ಜೀವಂತಿಕೆಗೆ ಮೇಕೆದಾಟು ಪಾದಯಾತ್ರೆ”

ಹೊಸದಿಗಂತ ವರದಿ, ಚಿಕ್ಕೋಡಿ:

ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಬದುಕಿದೆ ಎಂಬುದಕ್ಕೆ ಪಾದಯಾತ್ರೆ ಮಾಡುತ್ತಿದ್ದಾರೆ‌. ಅವರ ಜೀವಂತಿಕೆಯನ್ನು ಜನರಿಗೆ ತೋಪರ್ಡಿಸಲು ಮೇಕೆದಾಟು ಪಾದಯಾತ್ರೆ ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ವಿರುದ್ಧ ಮಾಜಿ ಉಪಮುಖ್ಯಮಂತ್ರಿ ಹಾಗು ಬಿಜೆಪಿ ಪಕ್ಷದ ಉಪಾಧ್ಯಕ್ಷ ಲಕ್ಷ್ಮಣ್ ಸವದಿ ಟಿಕಾಪ್ರಹಾರ ನಡೆಸಿದರು.

ಅಥಣಿಯಲ್ಲಿ ಲಕ್ಷ್ಮಣ್ ಸವದಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮೇಕೆದಾಟು ಜಾರಿಗೆ ಬಂದಿದ್ದು ಬಿ.ಜೆ.ಪಿ ಹಿಂದಿನ ಸರಕಾರದಲ್ಲಿ ನಂತರ ಕಾಂಗ್ರೆಸ್ ನವರು ಅಧಿಕಾರದಲ್ಲಿ ಇದ್ದಾಗ. ಆಗ ಕಾರ್ಯ ಮಾಡಿದೆ ಈಗ ಪಾದಯಾತ್ರೆ ಮಾಡುತ್ತಿದ್ದಾರೆ. ತನ್ನ ಸ್ಥಾನಗಳನ್ನು ಕಳೆದುಕೊಂಡ ಕಾಂಗ್ರೆಸ್ ಬದುಕಿದೆ ಎಂದು ತೋರ್ಪಡಿಸಲು ಈ ಪಾದಯಾತ್ರೆ ಗೆ ಮುಂದಾಗಿದೆ. ಈ ಪಾದಯಾತ್ರೆ ಜನರ ಹಿತಕ್ಕಾಗಿ ಅಲ್ಲ ಎಂದು ಕಾಂಗ್ರೆಸ್ ನಾಯಕರ ಕಾಲೆಳೆದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here