ಬೇಕಾಗಿರುವ ಪದಾರ್ಥಗಳು:
ನೆಲ್ಲಿಕಾಯಿ
ಎಣ್ಣೆ
ಸಾಸಿವೆ
ಅರಿಶಿನ
ಜೀರಿಗೆ ಪುಡಿ
ಇಂಗು
ಮೆಂತ್ಯೆ ಪುಡಿ
ಉಪ್ಪು
ಖಾರದ ಪುಡಿ
ಮಾಡುವ ವಿಧಾನ:
ಮೊದಲು ನೆಲ್ಲಿಕಾಯಿಯನ್ನು ಬೇಯಿಸಿ ಅದರಲ್ಲಿನ ಬೀಜ ತೆಗೆದು ಮಿಕ್ಸಿಯಲ್ಲಿ ರುಬ್ಬಿಕೊಳ್ಳಿ.
ನಂತರ ಒಂದು ಬಾಣಲಿಯಲ್ಲಿ ಎಣ್ಣೆ, ಸಾಸಿವೆ, ಇಂಗು, ಅರಿಶಿನ, ಮೆಂತ್ಯೆ ಪುಡಿ ಹಾಕಿ ಫ್ರೈ ಮಾಡಿ.
ಬಳಿಕ ಇದಕ್ಕೆ ರುಬ್ಬಿಕೊಂಡಿರುವ ನೆಲ್ಲಿಕಾಯಿ ಹಾಗೂ ಖಾರದ ಪುಡಿ, ಉಪ್ಪು ಹಾಕಿ ಚೆನ್ನಾಗಿ ಕುದಿಸಿದರೆ ರುಚಿಯಾದ ನೆಲ್ಲಿಕಾಯಿ ತೊಕ್ಕು ಸವಿಯಲು ಸಿದ್ಧ