ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚಿಗೆ ನಡೆದ ಶ್ರೀಲಂಕಾ ವಿರುದ್ಧದ ಟೆಸ್ಟ್ ಮ್ಯಾಚ್ ನಲ್ಲಿ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದ ಮನಗೆದ್ದ ಕರ್ನಾಟಕದ ದೇವದತ್ ಪಡಿಕ್ಕಲ್ ಇದೀಗ ದುಲೀಪ್ ಟ್ರೋಫಿ ಫೈನಲ್‌ನಲ್ಲೂ ಅದ್ಭುತ ಆಟವಾಡಿ ಗಮನಸೆಳೆದಿದ್ದಾರೆ.
ಈಸ್ಟ್ ಝೋನ್ ವಿರುದ್ಧ ನಡೆಯುತ್ತಿರುವ ಫೈನಲ್ ಪಂದ್ಯದಲ್ಲಿ ಸೌತ್ ಝೋನ್ ಪರ ಪಡಿಕ್ಕಲ್ ಭರ್ಜರಿ ಅರ್ಧಶತಕ ದಾಖಲಿಸಿದ್ದಾರೆ.
104 ಎಸೆತಗಳ ಲ್ಲಿ 62 ರನ್
ಚೆನ್ನೈನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರೋ ಈ ಪಂದ್ಯದಲ್ಲಿ ಪಡಿಕ್ಕಲ್ 104 ಎಸೆತಗಳ ಲ್ಲಿ 62 ರನ್ ಬಾರಿಸಿದರು. ಅವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿಗಳಿದ್ದವು. ಎರಡನೇ ವಿಕೆಟ್‌ಗೆ ನಾರಾಯಣ್ ಜಗದೀಸನ್ ಜೊತೆ 60 ರನ್‌ಗಳ ಜೊತೆಯಾಟ ನೀಡಿದ ಪಡಿಕ್ಕಲ್, ಬಳಿಕ ಶೈಕ್ ರಶೀದ್ ಜೊತೆ ಮೂರನೇ ವಿಕೆಟ್‌ಗೆ 56 ರನ್ ಪೇರಿಸಿದರು.
ಇದನ್ನೂ ಓದಿ:
ಆದರೆ ಪಡಿಕ್ಕಲ್ 36ನೇ ಓವರ್‌ನಲ್ಲಿ ಮುಕೇಶ್ ಕುಮಾರ್ ಬೌಲಿಂಗ್‌ನಲ್ಲಿ ಸಿಕ್ಸ್ ಹೊಡೆಯೋಕೆ ಹೋಗಿ ಕ್ಯಾಚ್ ನೀಡಿ ವಿಕೆಟ್ ಒಪ್ಪಿಸಿದರು.
708 ರನ್‌ಗಳಿಗೆ ಆಲೌಟ್
ಇತ್ತ ಈಸ್ಟ್ ಝೋನ್ ಮೊದಲ ಇನ್ನಿಂಗ್ಸ್‌ನಲ್ಲಿ ಬರೋಬ್ಬರಿ 708 ರನ್‌ಗಳಿಗೆ ಆಲೌಟ್ ಆಗಿದೆ. ನಾಯಕ ಇಶಾನ್ ಕಿಶನ್ 270 ರನ್‌ಗಳ ಭರ್ಜರಿ ಇನ್ನಿಂಗ್ಸ್ ಆಡಿದ್ದು, ಕುಮಾರ್ ಕುಶಾಗ್ರ 101 ರನ್ ಗಳಿಸಿದ್ದಾರೆ. ಇಶಾನ್ ಕಿಶನ್ ಅವರ 270 ರನ್‌ಗಳ ಮೂಲಕ ದುಲೀಪ್ ಟ್ರೋಫಿಯಲ್ಲಿ 250ಕ್ಕೂ ಹೆಚ್ಚು ರನ್ ಗಳಿಸಿದ ಮೊದಲ ವಿಕೆಟ್‌ಕೀಪರ್-ಬ್ಯಾಟರ್ ಎಂಬ ದಾಖಲೆ ನಿರ್ಮಿಸಿದ್ದಾರೆ.



