ಪದ್ಮ ಪ್ರಶಸ್ತಿ ಪ್ರಕಟ: ಕರ್ನಾಟಕದ ಪ್ರೇಮಾ, ಸೋಮಣ್ಣಗೆ ಒಲಿದ ‘ಪದ್ಮಶ್ರೀ’ ಗೌರವ

ಹೊಸದಿಗಂತ ಡಿಜಿಟಲ್ ಡೆಸ್ಕ್: 

2024ನೇ ಸಾಲಿನ ಪದ್ಮ ಪ್ರಶಸ್ತಿಗಳನ್ನು (Padma Awards) ಪ್ರಕಟಿಸಲಾಗಿದೆ .

ಗಣರಾಜ್ಯೋತ್ಸವದ ಮುನ್ನಾದಿನದಂದು ಗುರುವಾರ ರಾತ್ರಿ 2024 ರ ಪದ್ಮ ಪ್ರಶಸ್ತಿಗಳನ್ನು ಘೋಷಿಸಲಾಯಿತು. ಅದೇ ರೀತಿ ಸಾಮಾಜಿಕ ಕಾರ್ಯಕರ್ತೆ ಪ್ರೇಮ ಧನರಾಜ್‌ ಹಾಗೂ ಬುಡಕಟ್ಟು ಸಮುದಾಯದ ಮೈಸೂರಿನ ಜೇನುಕುರುಬ ಸೋಮಣ್ಣ ಸೇರಿ ಒಟ್ಟು 34 ಮಂದಿಗೆ ಪದ್ಮಶ್ರೀ ಪ್ರಶಸ್ತಿ ದಕ್ಕಿದೆ.

2024ನೇ ಸಾಲಿನ ಪದ್ಮ ಶ್ರೀ ಪ್ರಶಸ್ತಿಯನ್ನು ಮೈಸೂರಿನ ಬುಡಕಟ್ಟು ಕಲ್ಯಾಣ ಕಾರ್ಯಕರ್ತೆ, ದಣಿವರಿಯದೆ ಕೆಲಸ ಮಾಡುತ್ತಿರುವಂತ ಜೇನು ಕುರುಬ ಸಮುದಾಯದ ಸೋಮಣ್ಣ ಅವರಿಗೆ ನೀಡಲಾಗಿದೆ.

ಜೇನು ಕುರುಬ ಸಮುದಾಯದವರಾಗಿರುವಂತ ಸೋಮಣ್ಣ ಅವರು, ಎಲೆ ಮರೆಯ ಕಾಯಿಯಂತೆ 4 ದಶಕಗಳಿಂದ ಜೆನು ಕುರುಬ ಜನಾಂಗದ ಉನ್ನತಿಗಾಗಿ ಕೆಲಸ ಮಾಡುತ್ತಿದ್ದಾರೆ.

ಅದೇ ರೀತಿ 14ನೇ ವಯಸ್ಸಿನಲ್ಲಿ ಕಾಡು ಆನೆಗಳನ್ನ ಪಳಗಿಸಲು ಪ್ರಾರಂಭಿಸಿದ ಭಾರತದ ಮೊದಲ ಮಹಿಳಾ ಆನೆ ಮಾವುತೆ ಪಾರ್ವತಿ ಬರುವಾ ಅವರು ಸಾಮಾಜಿಕ ಕಾರ್ಯ (ಪ್ರಾಣಿ ಕಲ್ಯಾಣ) ಕ್ಷೇತ್ರದಲ್ಲಿ ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರೇಮಾ ದೇವರಾಜ್​
ವೃತ್ತಿಯಲ್ಲಿ ವೈದ್ಯರಾಗಿರುವ ಪ್ರೇಮಾ ದೇವರಾಜ್​ (72) ಅವರು ಅಗ್ನಿ ರಕ್ಷಾ ಎಂಬ ಸರ್ಕಾರೇತರ ಸಂಸ್ಥೆಯ ಮೂಲಕ ಸುಟ್ಟ ಗಾಯಗಳಿಗೆ ತುತ್ತಾದ 25, 000ಕ್ಕೂ ಅಧಿಕ ಮಂದಿಗೆ ಉಚಿತ ಶಸ್ತ್ರಚಿಕಿತ್ಸೆ ನೆರವೇರಿಸಿದ್ದಾರೆ. ಪ್ಲಾಸ್ಟಿಕ್ ಸರ್ಜರಿ ಕುರಿತು 3 ಪುಸ್ತಕಗಳನ್ನು ಬರೆದಿದ್ದಾರೆ. 8 ನೇ ವಯಸ್ಸಿಗೆ ಗ್ಯಾಸ್​ ದುರಂತದಲ್ಲಿ ಶೇ.50ರಷ್ಟು ಸುಟ್ಟ ಗಾಯಗಳಿಂದ ಬದುಕುಳಿದಿದ್ದ ಇವರು ಬಾಲ್ಯದಲ್ಲಿ 14 ಕ್ಕೂ ಹೆಚ್ಚು ಶಸ್ತ್ರಚಿಕಿತ್ಸೆಗೆ ಒಳಪಟ್ಟಿದ್ದಾರೆ. ವೆಲ್ಲೂರು ಕಾಲೇಜಿನಲ್ಲಿ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!