ಹೊಸದಿಗಂತ ಡಿಜಿಟಲ್ ಡೆಸ್ಕ್:
ಪದ್ಮಶ್ರೀ ಮತ್ತು ನಾಡೋಜಾ ಪುರಸ್ಕೃತೆ, ಜನಪದ ಗಾನ ಕೋಗಿಲೆ ಸುಕ್ರಿ ಬೊಮ್ಮಗೌಡ (91) ವಿಧಿವಶರಾಗಿದ್ದಾರೆ.
ಜನಪದ ಕೋಗಿಲೆ ಎಂದೇ ಖ್ಯಾತಿ ಪಡೆದಿರುವ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ ಬಡಿಗೇರಿಯ ಸುಕ್ರಿ ಬೊಮ್ಮಗೌಡ ವಯೋಸಹಜ ಕಾಯಿಲೆಯಿಂದಾಗಿ ತಮ್ಮ ಸ್ವಗೃಹದಲ್ಲಿ ಕೊನೆಯುಸಿರೆಳೆದಿದ್ದಾರೆ.
ಹಾಲಕ್ಕಿ ಜನಾಂಗದ ಜನಪದ ಹಾಡುಗಳನ್ನು ಹಾಡುವ ಮೂಲಕ ಹಳ್ಳಿ ಸೊಗಡನ್ನ ದಿಲ್ಲಿಗೆ ಕೊಂಡೊಯ್ದ ಕೀರ್ತಿ ಇವರದ್ದು. ಇದಲ್ಲದೇ ಮದ್ಯ ಮುಕ್ತ ಗ್ರಾಮ ಮಾಡುವ ಹೋರಾಟದಲ್ಲಿ ಭಾಗಿಯಾಗಿ ತಮ್ಮ ಊರನ್ನು ಮದ್ಯ ಮುಕ್ತ ಗ್ರಾಮವನ್ನಾಗಿಸಿದರು. 2017 ರಲ್ಲಿ ಇವರ ಜನಪದ ಹಾಡಿನ ಸಾಧನೆಗೆ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು.
ಇಬ್ಬರು ಮೊಮ್ಮೊಕ್ಕಳು, ಓರ್ವ ಸೊಸೆಯನ್ನು ಅಗಲಿದ್ದಾರೆ. ಇಂದು ಬಡಿಗೇರಿಯಲ್ಲಿ ಇವರ ಅಂತ್ಯಸಂಸ್ಕಾರ ನೆರವೇರಲಿದೆ.