Friday, December 8, 2023

Latest Posts

ವಿದೇಶಿ ಮಹಿಳೆಯನ್ನು ಕೊಂದು ಕೈಕಾಲು ಕಟ್ಟಿ, ಪ್ಲಾಸ್ಟಿಕ್‌ ಕವರ್‌ನಲ್ಲಿ ಸುತ್ತಿದ ಪಾಗಲ್‌ ಪ್ರೇಮಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಸ್ವಿಜರ್ಲೆಂಡ್‌ ಮಹಿಳೆಯನ್ನು ಹತ್ಯೆ ಮಾಡಲಾಗಿದೆ.

ಪಶ್ಚಿಮ ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿ 30 ವರ್ಷದ ಸ್ವಿಸ್ ಮಹಿಳೆಯ ಹತ್ಯೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸಿದ್ದಾರೆ. ದೇಹದ ಕೈ ಮತ್ತು ಕಾಲುಗಳನ್ನು ಲೋಹದ ಸರಪಳಿಗಳಿಂದ ಕಟ್ಟಲಾಗಿತ್ತು. ಹಾಗೂ ಮೃತದೇಹದ ಮೇಲಿನ ಭಾಗವನ್ನು ಕಪ್ಪು ಪ್ಲಾಸ್ಟಿಕ್ ಚೀಲದಿಂದ ಮುಚ್ಚಲಾಗಿತ್ತು ಎಂದೂ ಪೊಲೀಸರು ತಿಳಿಸಿದ್ದಾರೆ.

ಆರೋಪಿಯನ್ನು ಗುರುಪ್ರೀತ್ ಸಿಂಗ್ ಎಂದು ಗುರುತಿಸಲಾಗಿದ್ದು, ಆತ ಸ್ವಿಟ್ಜರ್ಲೆಂಡ್‌ನಲ್ಲಿ ಭೇಟಿಯಾಗಿದ್ದ 30 ವರ್ಷದ ಮಹಿಳೆಯೊಂದಿಗೆ ಸಂಬಂಧ ಹೊಂದಿದ್ದ. ಆಕೆಗೆ ಬೇರೆಯವರ ಜೊತೆ ಅಕ್ರಮ ಸಂಬಂಧವಿದೆ ಎಂದು ಶಂಕಿಸಿ ಆಕೆಯನ್ನು ಕೊಲೆ ಮಾಡಿದ್ದಾರೆ ಎಂದೂ ದೆಹಲಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಇಬ್ಬರೂ ಅವರವರ ದೇಶದಲ್ಲಿದ್ದರೂ ಸಂಬಂಧ ಹೊಂದಿದ್ದರು. ಗುರುಪ್ರೀತ್ ಸಿಂಗ್ ಆಗಾಗ್ಗೆ ಮಹಿಳೆಯನ್ನು ನೋಡಲು ಸ್ವಿಟ್ಜರ್ಲೆಂಡ್‌ಗೆ ಹೋಗುತ್ತಿದ್ದರ. ಆದರೆ, ಸ್ವಿಸ್‌ ಮಹಿಳೆಗೆ ಬೇರೆ ಪುರುಷನ ಜತೆ ಅಕ್ರಮ ಸಂಬಂಧವಿದೆ ಎಂದು ಗುರುಪ್ರೀತ್‌ ಸಿಂಗ್‌ಗೆ ಅನುಮಾನವಿದ್ದ ಕಾರಣ, ಈ ಬಾರಿ ಭಾರತಕ್ಕೆ ಬರುವಂತೆ ಮಹಿಳೆಗೆ ಹೇಳಿ ಕೊಲೆಗೆ ಯೋಜನೆ ರೂಪಿಸಿದ್ದ ಎನ್ನಲಾಗಿದೆ.

ಪ್ರಾಥಮಿಕ ವಿಚಾರಣೆಯಿಂದ ಆರೋಪಿ ಮಾಟ ಮಂತ್ರ ಮಾಡುವ ನೆಪದಲ್ಲಿ ಮಹಿಳೆಯ ಕೈಕಾಲುಗಳನ್ನು ಕಟ್ಟಿಹಾಕಿ ನಂತರ ಆಕೆಯನ್ನು ಹತ್ಯೆಗೈದಿರುವುದು ತಿಳಿದುಬಂದಿದೆ.

ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ಸಹಾಯದಿಂದ ಶವವನ್ನು ಕಾರಿನಲ್ಲಿ ಅಲ್ಲಿಗೆ ತರಲಾಗಿದೆ ಎಂದು ಪೊಲೀಸರು ಪತ್ತೆ ಮಾಡಿದರು.ಕಾರಿನ ನೋಂದಣಿ ಸಂಖ್ಯೆಯನ್ನು ಕಂಡುಕೊಂಡಿದ್ದು ಮತ್ತು ತಂಡವು ವಾಹನದ ಮಾಲೀಕರನ್ನು ಪತ್ತೆಹಚ್ಚಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!