ರೇಣುಕಾ ಸ್ವಾಮಿ ಕುರಿತು ವಿಕಿಪೀಡಿಯಾದಲ್ಲಿ ಪೇಜ್‌ ಓಪನ್‌!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:
 
ಬೆಂಗಳೂರು: ರಾಜ್ಯದಲ್ಲಿ ಅಷ್ಟೇ ಅಲ್ಲದೇ ದೇಶಾದ್ಯಂತ ತೀವ್ರ ಚರ್ಚೆಯಾಗಿರುವ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಮರ್ಡರ್ ಆಫ್ ರೇಣುಕಾಸ್ವಾಮಿ ಎಂಬ ಹೆಸರಿನಲ್ಲಿ ವಿಕಿಪೀಡಿಯಾದಲ್ಲಿ ಪೇಜ್ ಸೃಷ್ಟಿಸಲಾಗಿದೆ.

ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅದರಲ್ಲಿ ಹತ್ಯೆ ನಡೆದ ದಿನಾಂಕ, ಮೃತದೇಹ ಪತ್ತೆಯಾಗಿರುವ ಸ್ಥಳ, ಪತ್ನಿಯ ಹೆಸರು, ತಂದೆ-ತಾಯಿ ಹೆಸರು, ಕೊಲೆಗೆ ಕಾರಣರಾದ ಆರೋಪಿಗಳ ಹೆಸರು ಸೇರಿದಂತೆ ಹಲವು ವಿವರಗಳ ಬಗ್ಗೆ ಮಾಹಿತಿ ಲಭ್ಯವಿದೆ.

ಗಣ್ಯರು ಮತ್ತು ಜನಪ್ರಿಯ ವ್ಯಕ್ತಿಗಳ ಹೆಸರು ಹಾಗೂ ಅವರ ಬಯಾಗ್ರಫಿಗಳು ಸೇರಿದಂತರೆ ಇತರೆ ಹಲವು ಮಾಹಿತಿಗಳ ವಿವರಗಳನ್ನು ನೀಡುವ ವಿಕಿಪೀಡಿಯಾದಲ್ಲಿ ಹತ್ಯೆಯಾಗಿರುವ ವ್ಯಕ್ತಿಯ ಹೆಸರಿನಲ್ಲಿ ಪೇಜ್ ಸೃಷ್ಟಿಸಿರುವುದು ಇದೇ ಮೊದಲು ಎನ್ನಲಾಗಿದೆ. ಅಲ್ಲದೇ, ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಭಾಗಿಯಾಗಿರುವ ನಟ ದರ್ಶನ್ ಸೇರಿ 17 ಆರೋಪಿಗಳು ಕೃತ್ಯವೆಸಗಿರುವುದಕ್ಕೆ ಕಾರಣವೇನು? ನಟ ದರ್ಶನ್ ಮತ್ತು ಗ್ಯಾಂಗ್‌ನ ಪಾತ್ರವೆಂತದ್ದು? ಎಂಬ ಬಗ್ಗೆ ಉಲ್ಲೇಖಿಸಲಾಗಿದೆ. ಜತೆಗೆ ನಟ-ನಟಿಯರು ಹತ್ಯೆ ಮತ್ತು ನಟ ದರ್ಶನ್ ಬಗ್ಗೆ ಪ್ರತಿಕ್ರಿಯಿಸಿರುವುದು ಕೂಡ ನಮೂದಿಸಲಾಗಿದೆ. ಇದೀಗ ಅನೇಕ ಜನರು ಮರ್ಡರ್ ಆಫ್ ರೇಣುಕಾಸ್ವಾಮಿ ಪೇಜ್‌ಗೆ ಹೋಗಿ ಅಲ್ಲಿರುವ ಮಾಹಿತಿಗಳನ್ನು ಓದುತ್ತಿರುವುದು ತಿಳಿದುಬಂದಿದೆ.

Murder of Renukaswamy

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!