ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಸರ್ಕಾರದ ಆದೇಶದಂತೆ, ತನ್ನ ದೇಶಕ್ಕೆ ವಾಪಸ್ ಹೊರಟಿದ್ದ 69 ವರ್ಷದ ಪಾಕಿಸ್ತಾನಿ ಪ್ರಜೆಯೊಬ್ಬರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಬ್ದುಲ್ ವಹೀದ್ ಅವರನ್ನು ಪಾಕಿಸ್ತಾನಕ್ಕೆ ವಾಪಸ್ ಕಳುಹಿಸಲು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಶ್ರೀನಗರದಿಂದ ಕರೆತಂದಿದ್ದರು. ಅವರು ಕಳೆದ 17 ವರ್ಷಗಳಿಂದ ಭಾರತದಲ್ಲಿ ವಾಸಿಸುತ್ತಿದ್ದರು. ಅಲ್ಲದೆ, ವಹೀದ್ ಬಳಿ ಅವಧಿ ಮೀರಿದ ವೀಸಾ ಇರುವುದು ಪೊಲೀಸ್ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.
ಈ ನಡುವೆ, ಭಾರತಕ್ಕೆ ಮರಳಲು ಯಾವುದೇ ಅಡೆತಡೆ ಇಲ್ಲದ (ಎನ್‌ಒಆರ್‌ಐ) ವೀಸಾ ಹೊಂದಿದ್ದ ಒಟ್ಟು 224 ಭಾರತೀಯ ಪ್ರಜೆಗಳು ಮತ್ತು ಪಾಕಿಸ್ತಾನಿ ನಾಗರಿಕರು ಅಟ್ಟಾರಿ ಗಡಿಯಲ್ಲಿರುವ ಇಂಟಿಗ್ರೇಟೆಡ್ ಚೆಕ್ ಪೋಸ್ಟ್ (ಐಸಿಪಿ) ಮೂಲಕ ಭಾರತಕ್ಕೆ ಪ್ರವೇಶಿಸಿದರು. ಇದೇ ವೇಳೆ, ಒಟ್ಟು 139 ಪಾಕಿಸ್ತಾನಿ ಪ್ರಜೆಗಳು ತಮ್ಮ ದೇಶಕ್ಕೆ ತೆರಳಿದರು.