ಪಹಲ್ಗಾಮ್ ಎಫೆಕ್ಟ್‌: ಭಾರತದಲ್ಲಿ ಪಾಕ್ ನಟ, ಗಾಯಕನ ಇನ್ಸ್ಟಾಗ್ರಾಂ ಖಾತೆಗೂ ಬ್ಯಾನ್

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್‌ ದಾಳಿ ಬಳಿಕ ಪಾಕಿಸ್ತಾನಿ ಪ್ರಜೆಗಳನ್ನು ಭಾರತ ಬಿಟ್ಟು ಸ್ವದೇಶಕ್ಕೆ ಮರಳುವಂತೆ ಆದೇಶಿಸಿದ್ದಂತ ಭಾರತವು, ಆ ಬಳಿಕ ಪಾಕಿಸ್ತಾನದ ಯ್ಯೂಟ್ಯೂಬ್ ಚಾನಲ್ ಗಳನ್ನು ನಿಷೇಧಿಸಿತ್ತು.

ಇದೀಗ ಪಾಕಿಸ್ತಾನಿ ನಟ ಫವಾದ್ ಖಾನ್ ಮತ್ತು ಗಾಯಕ ಅತಿಫ್ ಅಸ್ಲಾಂ ಅವರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಭಾರತೀಯ ಬಳಕೆದಾರರಿಗೆ ನಿರ್ಬಂಧಿಸಲಾಗಿದೆ.

ಇಬ್ಬರು ಪಾಕಿಸ್ತಾನಿ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗಳಲ್ಲಿ;ಭಾರತದಲ್ಲಿ ಖಾತೆ ಲಭ್ಯವಿಲ್ಲ ಎಂದು ತೋರಿಸುತ್ತದೆ.

2014 ರಲ್ಲಿ ‘ಖೂಬ್ಸೂರತ್’ ಚಿತ್ರದಲ್ಲಿ ಸೋನಮ್ ಕಪೂರ್ ಜೊತೆ ನಟಿಸುವ ಮೂಲಕ ಖಾನ್ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. “ಕಪೂರ್ & ಸನ್ಸ್” ಮತ್ತು “ಏ ದಿಲ್ ಹೈ ಮುಷ್ಕಿಲ್‌ನಲ್ಲಿ ನಟಿಸಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ತೂ ಜಾನೆ ನಾ, ತೇರಾ ಹೋನೆ ಲಗಾ ಹೂ (ಎರಡೂ ಅಜಬ್ ಪ್ರೇಮ್ ಕಿ ಗಜಬ್ ಕಹಾನಿ) ಮತ್ತು ಪೆಹ್ಲಿ ನಜರ್ ಮೇ (ರೇಸ್) ನಂತಹ ಜನಪ್ರಿಯ ಬಾಲಿವುಡ್ ಸಾಂಗ್‌ನ್ನು ಹಾಡಿರುವ ಅತೀಫ್‌ ಅಸ್ಲಾಂ ಅವರ ಖಾತೆಯೂ ಬ್ಯಾನ್‌ ಆಗಿದೆ. ಅವರು ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ ಮತ್ತು ಫಿಲ್ಮ್‌ಫೇರ್ ಪ್ರಶಸ್ತಿಗಳಿಗೆ ನಾಮನಿರ್ದೇಶನಗೊಂಡಿದ್ದಾರೆ.

ಈಗಾಗಲೇ ಪಾಕಿಸ್ತಾನದ ಹಲವು ನಟ ನಟಿಯರ ಇನ್ಸ್ಟಾಗ್ರಾಂ ಖಾತೆಯನ್ನು ಭಾರತದಲ್ಲಿ ನಿಷೇಧಿಸಲಾಗಿದೆ. ಮಹಿರಾ ಖಾನ್, ಹನಿಯಾ ಆಮಿರ್ ಮತ್ತು ಅಲಿ ಜಾಫರ್ ಸೇರಿದಂತೆ ಜನಪ್ರಿಯ ಪಾಕಿಸ್ತಾನಿ ಕಲಾವಿದರ ಇನ್‌ಸ್ಟಾಗ್ರಾಮ್ ಖಾತೆಗಳನ್ನು ಬುಧವಾರ ಸಂಜೆ ಭಾರತದಲ್ಲಿ ನಿರ್ಬಂಧಿಸಲಾಗಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here