ಬ್ರಿಟಿಷರ ವಿರುದ್ಧ ಟಿಪ್ಪು ವಿಜಯದ ವರ್ಣಚಿತ್ರ 6 ಕೋಟಿಗೆ ಹರಾಜು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಈಸ್ಟ್ ಇಂಡಿಯಾ ಕಂಪನಿಯ ಮೇಲೆ ಮೈಸೂರು ದೊರೆ ಹೈದರ್ ಅಲಿ, ಟಿಪ್ಪು 1780 ರಲ್ಲಿ ಸಾಧಿಸಿದ  ವಿಜಯವನ್ನು ಪ್ರತಿಬಿಂಬಿಸುವ ವರ್ಣಚಿತ್ರ ಲಂಡನ್‌ನಲ್ಲಿ 6.28 ಕೋಟಿ ರು.ಗಳಿಗೆ ಹರಾಜಾಗಿದೆ.
ಎರಡನೇ ಆಂಗ್ಲೋ- ಮೈಸೂರು ಯುದ್ಧದಲ್ಲಿ ಸೆಪ್ಟೆಂಬರ್ 10, 1780 ರಲ್ಲಿ ನಡೆದ ‘ಪೊಲ್ಲಿಲೂರ್ʼ ಕದನದಲ್ಲಿ ಟಿಪ್ಪು ಸಾಧಿಸಿದ ವಿಜಯದ ಚಿತ್ರಣ ಈ ವರ್ಣಚಿತ್ರದಲ್ಲಿದೆ.
ಈ ಕದನದ ವಿಜಯದ ಸ್ಮರಣಾರ್ಥ ಟಿಪ್ಪು 1784ರಲ್ಲಿ ಸೆರಿಂಗಪಟ್ಟಣಂನಲ್ಲಿ ಕಟ್ಟಿಸಿದ ದರಿಯಾ ದೌಲತ್ ಬಾಗ್ ಅರಮನೆಯಲ್ಲಿ ಈ ಕದನದ ವರ್ಣಚಿತ್ರವನ್ನು ಮಾಡಿಸಿದ್ದ. ಈ ತೈಲಚಿತ್ರವು ಸುಮಾರು 32 ಅಡಿ ಉದ್ದ ಹಾಗೂ 10 ಅಡಿಗಳಷ್ಟು ಎತ್ತರವಿದೆ. ನಾಲ್ಕನೇ ಆಂಗ್ಲೋ ಮೈಸೂರು ಯುದ್ಧದಲ್ಲಿ ಟಿಪ್ಪುವನ್ನು ಸೋಲಿಸಿದ್ದ ಬ್ರಿಟೀಷರು ಈ ಚಿತ್ರವನ್ನು ಹೊತ್ತೊಯ್ದಿದ್ದರು.
ಲಂಡನ್‌ ನ ಸೊಥೆಬಿ ಎಂಬಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಈ ಚಿತ್ರವು ಹರಾಜಿನ ಕೇಂದ್ರಬಿಂದುವಾಗಿತ್ತು. ಅಂತಿಮವಾಗಿ ವರ್ಣಚಿತ್ರವು ದಾಖಲೆ ಮೊತ್ತವಾದ 6. 28 ಕೋಟಿ ರೂ.ಗೆ ಹರಾಜಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!