ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದ ಪತ್ರಕರ್ತೆಯೊಬ್ಬರ ಬಾಲಕನಿಗೆ ಕಪಾಳಮೋಕ್ಷ ಮಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೇರ ಪ್ರಸಾರದ ವೇಳೆ ಅಡ್ಡಿಪಡಿಸಿ ಅನುಚಿತ ವರ್ತನೆ ತೋರಿದ ಬಾಲಕನಿಗೆ ಪತ್ರಕರ್ತೆಯೊಬ್ಬರು ಕಪಾಳಮೋಕ್ಷ ಮಾಡಿದ್ದಾರೆ. ಯಾವುದೋ ಸುದ್ದಿ ಪ್ರಸಾರದ ಲೈವ್ ಕೊಡುವ ವೇಳೆ ಈ ಬಾಲಕ ಕ್ಯಾಮರಾಗೆ ಅಡ್ಡಿಯುಂಟು ಮಾಡುತ್ತಿದ್ದನಂತೆ.
ಎಷ್ಟು ಬಾರಿ ಹೇಳಿದರೂ ಕೇಳದಿದ್ದಕ್ಕೆ ಸಿಟ್ಟಿಗೆದ್ದ ಆಕೆ ಕೆನ್ನೆಗೆ ಬಾರಿಸಿದ್ದಾಳೆ. ಇದೀಗ ವಿಡಿಯೋ ವೈರಲ್ ಆಗಿದ್ದು, ನೋಡುಗರು ಪತ್ರಕರ್ತೆ ವಿರುದ್ಧ ಸಿಡಿದೆದ್ದಿದ್ದಾರೆ. ಇನ್ನೊಮ್ಮೆ ಹೇಳುವುದು ಬಿಟ್ಟು ಈ ರೀತಿ ಕೈ ಮಾಡಿದ್ದು ಸರಿಯಲ್ಲ ಅಂತಿದಾರೆ ನೆಟ್ಟಿಗರು.
????????? pic.twitter.com/Vlojdq3bYO
— مومنہ (@ItxMeKarma) July 11, 2022