ಉದ್ಘಾಟನೆಯಾದ ಕೆಲವೇ ಗಂಟೆಯಲ್ಲಿ ಮಾಲ್ ಲೂಟಿ ಮಾಡಿದ ಪಾಕ್ ಜನರು!

ಹೊಸದಿಗಂತ ಡಿಜಿಟಲ್ ಡೆಸ್ಕ್: 

ಆರ್ಥಿಕ ಸಂಕಷ್ಟದಿಂದ ತತ್ತರಿಸಿ ಹೋಗಿರುವ ಪಾಕಿಸ್ತಾನದಲ್ಲಿ ಜನರು ಉದ್ಘಾಟನೆಯಾಗಿದ್ದ ‘Dream Bazaar’ ಮಾಲ್ ಅನ್ನು ಕೆಲವೇ ಗಂಟೆಗಳಲ್ಲಿ ಲೂಟಿ ಮಾಡಿದ್ದಾರೆ.

ಪಾಕಿಸ್ತಾನದ ಕರಾಚಿಯಲ್ಲಿ ‘ಡ್ರೀಮ್ ಬಜಾರ್’ ಮಾಲ್ ಅನ್ನು ಉದ್ಘಾಟನೆಗೊಂಡ ಮೊದಲ ದಿನವೇ ಜನರ ಗುಂಪೊಂದು ಧ್ವಂಸಗೊಳಿಸಿದ್ದು ಮಾತ್ರವಲ್ಲದೇ ಬ್ರಾಂಡೆಡ್ ಬಟ್ಟೆಗಳು ಸೇರಿದಂತೆ ಸಿಕ್ಕಸಿಕ್ಕ ವಸ್ತುಗಳನ್ನು ದೋಚಿ ಪರಾರಿಯಾಗಿದೆ.

ಜನರ ಗುಂಪು ಕಂಡು ಗಾಬರಿಗೊಂಡ ಮಾಲ್ ಸಿಬ್ಬಂದಿ, ಅದರ ದ್ವಾರಗಳನ್ನು ಮುಚ್ಚಲು ಪ್ರಯತ್ನಿಸಿದ್ದರು. ಆದರೆ ದೊಣ್ಣೆಗಳನ್ನು ಬೀಸುತ್ತಾ ಬಂದ ಕೆಲವರು, ಅದರ ಗಾಜಿನ ಪ್ರವೇಶ ದ್ವಾರವನ್ನು ಬಲಪ್ರಯೋಗದ ಮೂಲಕ ಪುಡಿಗಟ್ಟಿದ್ದರು. ಘಟನಾ ಸ್ಥಳದಲ್ಲಿ ಪೊಲೀಸರು ಇರಲಿಲ್ಲ. ಹಾಗಾಗಿ ಜನರನ್ನು ನಿಯಂತ್ರಿಸಲು ಸಾಧ್ಯವಾಗಲಿಲ್ಲ ಎಂದು ಮಾಲ್‌ ಸಿಬ್ಬಂದಿ ಅಸಹಾಯಕತೆ ಹೊರಹಾಕಿದ್ದಾರೆ .

ಕರಾಚಿಯ ಗುಲಿಸ್ತಾನ್-ಎ-ಜೋಹರ್‌ನಲ್ಲಿರುವ ‘ಡ್ರೀಮ್ ಬಜಾರ್’ ಮಾಲ್‌ನ ಉದ್ಘಾಟನೆ ಪ್ರಯುಕ್ತ ಮಾಲೀಕರು ವಿಶೇಷ 50 ರೂ ರಿಯಾಯಿತಿ ಘೋಷಿಸಿದ್ದರು. ಮೊದಲ ದಿನದಂದು ಪಾಕಿಸ್ತಾನದ ಕರೆನ್ಸಿಯ 50 ರೂ.ಗೂ ಕಡಿಮೆ ದರದಲ್ಲಿ ಬಟ್ಟೆಗಳನ್ನು ಮಾರಾಟ ಮಾಡುವುದಾಗಿ ಈ ಮಾಲ್ ಹೇಳಿಕೊಂಡಿತ್ತು.ಜತೆಗೆ ಸಾರ್ವಜನಿಕರನ್ನು ಆಕರ್ಷಿಸಲು ಟಿವಿ, ದಿನ ಪತ್ರಿಕೆ, ಸಾಮಾಜಿಕ ಮಾಧ್ಯಮಗಳಲ್ಲಿ ಜಾಹೀರಾತುಗಳನ್ನು ನೀಡುವ ಮೂಲಕ ಪ್ರಚಾರವನ್ನು ಮಾಡಿದ್ದರು. ಆದರೆ, ನಿಗದಿಯಂತೆ ಕಾರ್ಯಕ್ರಮ ನಡೆಯಲಿಲ್ಲ. ಹಾಗಾಗಿ ಮಾಲ್‌ ವ್ಯವಸ್ಥಾಪಕರು ಬಂದ್‌ ಮಾಡಲು ಮುಂದಾಗಿದ್ದರು. ಇದೇ ಸಂದರ್ಭದಲ್ಲಿ ನೆರೆದಿದ್ದ ಜನರು ಮಾಲ್‌ ಅನ್ನು ದ್ವಂಸಗೊಳಿಸಿದ್ದಾರೆ. ಜತೆಗೆ ಸಿಕ್ಕಸಿಕ್ಕ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!