ಪಾಕಿಸ್ತಾನದಲ್ಲಿ ರಾಜಕೀಯ ವಿಪ್ಲವ; ಇಮ್ರಾನ್‌ ಖಾನ್‌ ರಾಜೀನಾಮೆಗೆ ಪಟ್ಟುಹಿಡಿದ ಸ್ವಪಕ್ಷಿಯರು

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಪಾಕಿಸ್ತಾನ ಆಂತರಿಕ ರಾಜಕೀಯದಲ್ಲಿ ವಿಪ್ಲವ ಏರ್ಪಟ್ಟಿದ್ದು, ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ಅವಿಶ್ವಾಸ ಗೊತ್ತುವಳಿ ಮಂಡಿಸಿವೆ.
ಈ ನಡುವೆ ಆಡಳಿತಾರೂಢ ಪಕ್ಷದ ಸದಸ್ಯರೂ ಸಹ ಖಾನ್‌ ವಿರುದ್ಧ ಬಂಡಾಯ ಎದ್ದಿದ್ದು, ಇಮ್ರಾನ್‌ ಮಂಡನೆಯಾಗಿರುವ ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸುವುದಾಗಿ ಪಾಕಿಸ್ತಾನ್ ತೆಹ್ರೀಕ್ -ಎ-ಇನ್ಸಾಫ್ ಪಕ್ಷದ ಸುಮಾರು 20ಕ್ಕೂ ಹೆಚ್ಚು ಸಂಸದರು ಬೆದರಿಕೆ ಒಡ್ಡಿದ್ದಾರೆ. ಇದರಿಂದಾಗಿ ಇಮ್ರಾನ್‌ ಖಾನ್‌ ಸರ್ಕಾರದಚಪತನ ಬಹುತೇಕ ಖಚಿತ ಎನ್ನಲಾಗುತ್ತದೆ.
ಈ ಮಧ್ಯೆ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರ ಪಕ್ಷ ಪಕ್ಷಾಂತರ ಆರೋಪದ ಮೇರೆಗೆ ತನ್ನ ಅತೃಪ್ತ ಸಂಸದರಿಗೆ ಶೋಕಾಸ್ ನೋಟಿಸ್ ನೀಡಿದೆ. ನಿಮ್ಮನ್ನು ಪಕ್ಷಾಂತರಿ ಎಂದು ಏಕೆ ಘೋಷಿಸಬಾರದು? ಮತ್ತು ರಾಷ್ಟ್ರೀಯ ಆಸೆಂಬ್ಲಿ ಸದಸ್ಯತ್ವದಿಂದ ಅನರ್ಹಗೊಳಿಸಬಾರದು ಎಂಬ ಬಗ್ಗೆ ಮಾರ್ಚ್ 26 ರೊಳಗೆ ವಿವರಣೆ ನೀಡುವಂತೆ ಸೂಚಿಸಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!