Monday, October 2, 2023

Latest Posts

ಏಕದಿನ ಏಷ್ಯಾಕಪ್​ಗೆ 18 ಸದಸ್ಯರ ಟೀಮ್ ಪ್ರಕಟಿಸಿದ ಪಾಕಿಸ್ತಾನ!

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಏಕದಿನ ಏಷ್ಯಾಕಪ್​ಗೆ (Asia Cup 2023) 18 ಸದಸ್ಯರ ಬಲಿಷ್ಠ ತಂಡವನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB) ಪ್ರಕಟಿಸಿದೆ.

ಬಾಬರ್ ಅಜಮ್ (Babar Azam) ನಾಯಕತ್ವದಲ್ಲಿ ಪಾಕಿಸ್ತಾನ ತಂಡ ಕಣಕ್ಕಿಳಿಯಲಿದ್ದು, ತಂಡದ ಉಪನಾಯಕನಾಗಿ ಶಾದಾಬ್ ಖಾನ್ (Shadab Khan) ಆಯ್ಕೆಯಾಗಿದ್ದಾರೆ.

ಪಾಕಿಸ್ತಾನ ತಂಡದ ಹೊಸ ಮುಖ್ಯ ಆಯ್ಕೆಗಾರರಾಗಿ ಆಯ್ಕೆಯಾದ ಇಂಜಮಾಮ್-ಉಲ್-ಹಕ್ (Inzamam-ul-Haq) ನೇತೃತ್ವದಲ್ಲಿ ಈ ತಂಡವನ್ನು ಪ್ರಕಟಿಸಲಾಗಿದ್ದು, ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ 18 ಸದಸ್ಯರ ತಂಡವನ್ನು ಪ್ರಕಟಿಸಲಾಗಿದೆ. ಈ ಏಕದಿನ ಸರಣಿಗೆ ಆಯ್ಕೆಯಾಗಿರುವ ತಂಡದ 17 ಮಂದಿ ಏಷ್ಯಾಕಪ್ ಆಡಲಿದ್ದಾರೆ.

ಏಷ್ಯಾಕಪ್​ಗೆ ಪಾಕಿಸ್ತಾನ ತಂಡ

ಬಾಬರ್ ಆಜಮ್ (ನಾಯಕ), ಶಾದಾಬ್ ಖಾನ್, ಮೊಹಮ್ಮದ್ ರಿಜ್ವಾನ್ (ವಿಕೆಟ್ ಕೀಪರ್), ಫಖರ್ ಜಮಾನ್, ಅಬ್ದುಲ್ಲಾ ಶಫೀಕ್, ಇಮಾಮ್-ಉಲ್-ಹಕ್, ಸೌದ್ ಶಕೀಲ್ (ಅಫ್ಘಾನಿಸ್ತಾನ ವಿರುದ್ಧದ ಏಕದಿನ ಸರಣಿಗೆ ಮಾತ್ರ, ಸಲ್ಮಾನ್ ಅಲಿ ಅಘಾ, ಇಫ್ತಿಕರ್ ಅಹ್ಮದ್, ಮೊಹಮ್ಮದ್ ನವಾಜ್, ಉಸಾಮಾ ಮಿರ್, ಹ್ಯಾರಿಸ್ ರೌಫ್, ನಸೀಮ್ ಶಾ, ಶಾಹೀನ್ ಅಫ್ರಿದಿ, ತಯ್ಯಬ್ ತಾಹಿರ್, ಮೊಹಮ್ಮದ್ ಹ್ಯಾರಿಸ್, ಫಹೀಮ್ ಅಶ್ರಫ್, ಮೊಹಮ್ಮದ್ ವಾಸಿಮ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!