ಹೊಸದಿಗಂತ ಡಿಜಿಟಲ್ ಡೆಸ್ಕ್:
ಏಕದಿನ ವಿಶ್ವಕಪ್‌ಗೆ (ODI World Cup 2023) ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶುಕ್ರವಾರ ತಂಡವನ್ನು (Pakistan Cricket team) ಪ್ರಕಟಿಸಿದೆ.
ಏಷ್ಯಾಕಪ್ನಲ್ಲಿ ಆಡಿದ ಭಾಗಶಃ ತಂಡವೇ ವಿಶ್ವಕಪ್‌ಗೆ ಆಯ್ಕೆಯಾಗಿದೆ. ಆದರೆ ಇಬ್ಬರು ಆಟಗಾರರನ್ನು ಈ ತಂಡದಿಂದ ಕೈಬಿಡಲಾಗಿದೆ.
ನಸೀಮ್ ಶಾ (Naseem Shah) ಗಾಯದ ಸಮಸ್ಯೆಯಿಂದ ತಂಡದಿಂದ ಹೊರಗುಳಿದಿದ್ದರೆ ಅವರ ಜಾಗಕ್ಕೆ ಹಸನ್ ಅಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ವೇಗದ ಬೌಲರ್ ಫಹೀಮ್ ಅಶ್ರಫ್ ಬದಲಿಗೆ ಲೆಗ್ ಸ್ಪಿನ್ನರ್ ಉಸಾಮಾ ಮಿರ್ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲಾಗಿದೆ. ಆದರೆ ಭಾರತದ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಗಾಯಗೊಂಡಿದ್ದ ಹ್ಯಾರಿಸ್ ರೌಫ್ ಫಿಟ್ ಆಗಿ ತಂಡ ಸೇರಿಕೊಂಡಿದ್ದಾರೆ.
ನಸೀಮ್ ಶಾ ಅನುಪಸ್ಥಿತಿಯ ಹೊರತಾಗಿಯೂ, ಪಾಕಿಸ್ತಾನದ ಬೌಲಿಂಗ್ ವಿಭಾಗ ತುಂಬಾ ಪ್ರಬಲವಾಗಿದೆ. ತಂಡದಲ್ಲಿ ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಂ ಜೂನಿಯರ್, ಹಸನ್ ಅಲಿ ಮುಂತಾದ ಬೌಲರ್‌ಗಳಿದ್ದಾರೆ. ಇವರಲ್ಲದೆ ತಂಡದಲ್ಲಿ ಮೊಹಮ್ಮದ್ ನವಾಜ್ ಮತ್ತು ಮಿರ್ ಕೂಡ ಇದ್ದಾರೆ. ಈ ಮೂವರೂ ಆಲ್ ರೌಂಡರ್ಗಳಾಗಿದ್ದು ತಂಡದ ಬ್ಯಾಟಿಂಗ್ ಬಲವನ್ನೂ ಹೆಚ್ಚಿಸಿದ್ದಾರೆ.
ಪಾಕಿಸ್ತಾನದ ಬ್ಯಾಟಿಂಗ್ ವಿಭಾಗ ದುರ್ಬಲವಾಗಿ ಕಾಣುತ್ತಿದೆ. ನಾಯಕ ಬಾಬರ್ ಆಝಂ ಮತ್ತು ಮೊಹಮ್ಮದ್ ರಿಜ್ವಾನ್ ತಂಡದ ಪ್ರಮುಖ ಬ್ಯಾಟ್ಸ್‌ಮನ್‌ಗಳಾಗಿದ್ದಾರೆ. ಇವರಿಬ್ಬರು ವಿಕೆಟ್‌ನಲ್ಲಿರುವವರೆಗೂ ಪಾಕಿಸ್ತಾನದ ಬ್ಯಾಟಿಂಗ್ ಬಲಿಷ್ಠವಾಗಿರಲಿದೆ. ಆದರೆ ಈ ಇಬ್ಬರು ಪೆವಿಲಿಯನ್‌ಗೆ ಮರಳುತ್ತಿದ್ದಂತೆಯೇ ತಂಡಕ್ಕೆ ಸಂಕಷ್ಟ ಎದುರಾಗಿದೆ.
ಪಾಕಿಸ್ತಾನದ ವಿಶ್ವಕಪ್ ತಂಡ: ಬಾಬರ್ ಆಝಂ, ಫಖರ್ ಜಮಾನ್, ಇಮಾಮ್ ಉಲ್ ಹಕ್, ಅಬ್ದುಲ್ಲಾ ಶಫೀಕ್, ಮೊಹಮ್ಮದ್ ರಿಜ್ವಾನ್, ಸೌದ್ ಶಕೀಲ್, ಇಫ್ತಿಕರ್ ಅಹ್ಮದ್, ಅಘಾ ಸಲ್ಮಾನ್, ಮೊಹಮ್ಮದ್ ನವಾಜ್, ಶಾದಾಬ್ ಖಾನ್, ಉಸಾಮಾ ಮಿರ್, ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್, ಮೊಹಮ್ಮದ್ ವಾಸಿಮ್ ಮತ್ತು ಹಸನ್ ಅಲಿ.