ಬಾಬರ್‌ ಅಜಮ್‌ ರಾಜೀನಾಮೆ ಬೆನ್ನಲ್ಲೇ ನೂತನ ನಾಯಕನನ್ನು ಘೋಷಣೆ ಮಾಡಿದ ಪಾಕ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ವಿಶ್ವಕಪ್‌ನಲ್ಲಿ ನಲ್ಲಿ ಹೀನಾಯ ಸೋಲಿನ ಬಳಿಕ ನೈತಿಕ ಹೊಣೆ ಹೊತ್ತು ಪಾಕಿಸ್ತಾನ ತಂಡದ ಮೂರೂ ಮಾದರಿಯ ನಾಯಕತ್ವಕ್ಕೆ ಬಾಬರ್‌ ಅಜಮ್‌ ಬುಧವಾರ ರಾಜೀನಾಮೆ ನೀಡಿದ್ದು, ಇದರ ಬೆನ್ನಲ್ಲಿಯೇ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ತನ್ನ ಟೆಸ್ಟ್‌ ಹಾಗೂ ಟಿ20 ತಂಡಕ್ಕೆ ಹೊಸ ನಾಯಕನನ್ನು ಘೋಷಣೆ ಮಾಡಿದೆ.

ಟೆಸ್ಟ್‌ ತಂಡಕ್ಕೆ ಶಾನ್‌ ಮಸೂದ್‌ ನೂತನ ನಾಯಕರಾಗಿರಲಿದ್ದರೆ, ಟಿ20 ತಂಡಕ್ಕೆ ಶಾಹಿದ್‌ ಅಫ್ರಿದಿ ಅಳಿಯ ಶಹೀನ್‌ ಶಾ ಅಫ್ರಿದಿ ನಾಯಕರಾಗಿ ನೇಮಕವಾಗಿದ್ದಾರೆ.

ಸದ್ಯ ಯಾವುದೇ ಏಕದಿನ ಸರಣಿಯ ತಂಡದ ಲಿಸ್ಟ್‌ನಲ್ಲಿ ಇಲ್ಲದ ಕಾರಣ ಪಾಕಿಸ್ತಾನ ಕ್ರಿಕೆಟ್‌ ಮಂಡಳಿ ಏಕದಿನ ತಂಡಕ್ಕೆ ನಾಯಕನನ್ನು ಘೋಷಣೆ ಮಾಡಿಲ್ಲ.

ಪಾಕಿಸ್ತಾನ ಕ್ರಿಕೆಟ್‌ನ ಮೂರೂ ಮಾದರಿಯ ನಾಯಕ ಸ್ಥಾನದಿಂದ ಕೆಳಗಿಳಿಯುವುದಾಗಿ ಬಾಬರ್‌ ಅಜಂ ಘೋಷಣೆ ಮಾಡಿದ ಕೆಲವೇ ಗಂಟೆಗಳಲ್ಲಿ ಪಿಸಿಬಿ ತನ್ನ ಹೊಸ ನಾಯಕನನ್ನು ಪ್ರಕಟಿಸಿದೆ.

2019ರ ಅಕ್ಟೋಬರ್‌ನಿಂದ ಬಾಬರ್‌ ಅಜಂ ಪಾಕಿಸ್ತಾನ ತಂಡದ ಮೂರೂ ಮಾದರಿಯ ಕ್ರಿಕೆಟ್‌ನ ನಾಯಕರಾಗಿದ್ದರು. ಈ ವರ್ಷದ ಮೇ ತಿಂಗಳಲ್ಲಿ ಪಾಕಿಸ್ತಾನ ತಂಡವನ್ನು ಏಕದಿನ ಶ್ರೇಯಾಂಕದಲ್ಲಿ ನಂ.1 ಸ್ಥಾನಕ್ಕೇರಿಸಿದ್ದು ಅವರ ಶ್ರೇಷ್ಠ ಸಾಧನೆ ಎನಿಸಿತ್ತು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!