ಹೊಸದಿಗಂತ ಡಿಜಿಟಲ್ ಡೆಸ್ಕ್:
ಇತ್ತೀಚೆಗೆ ಅಮೆರಿಕಕ್ಕೆ ತೆರಳಿದ್ದ ಪಾಕಿಸ್ತಾನದ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್ , ಭಾರತ ಮತ್ತು ಪಾಕಿಸ್ತಾನದ ಆರ್ಥಿಕ ಪರಿಸ್ಥಿತಿಗಳನ್ನು ಹೋಲಿಸುವ ವೇಳೆ ಭಾರತವನ್ನು ಮರ್ಸಿಡಿಸ್ಗೂ, ಪಾಕಿಸ್ತಾನವನ್ನು ಕಸದ ಟ್ರಕ್ಗೂ ಹೋಲಿಸಿದ್ದರು.
ಇದೀಗ ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಪಾಕಿಸ್ತಾನ ತನ್ನ ವೈಫಲ್ಯವನ್ನು ಒಪ್ಪಿಕೊಂಡಿದೆ ಎಂದು ವ್ಯಂಗ್ಯವಾಡಿದ್ದಾರೆ.
ಎರಡು ದೇಶಗಳು ಒಂದೇ ಸಮಯದಲ್ಲಿ ಸ್ವಾತಂತ್ರ್ಯವನ್ನು ಗಳಿಸಿತ್ತು. ಒಂದು ದೇಶವು ಕಠಿಣ ಪರಿಶ್ರಮ, ಉತ್ತಮ ನೀತಿಗಳು ಮತ್ತು ದೂರದೃಷ್ಟಿಯ ಮೂಲಕ ಮರ್ಸಿಡಿಸ್ನಂತಹ ಆರ್ಥಿಕತೆಯನ್ನು ನಿರ್ಮಿಸಿದರೆ, ಇನ್ನೊಂದು ದೇಶವು ಇನ್ನೂ ಡಂಪ್ ಟ್ರಕ್ ಸ್ಥಿತಿಯಲ್ಲಿದೆ. ಅದು ಅವರ ಸ್ವಂತ ವೈಫಲ್ಯ ಎಂದು ಎಲ್ಲರೂ ಗೊತ್ತಿದೆ. ಇದೀಗ ಅವರೇ ಅದನ್ನು ಒಪ್ಪಿಕೊಂಡಿದ್ದಾರೆ. ಅಸಿಮ್ ಮುನೀರ್ ಅವರ ಈ ಹೇಳಿಕೆಯನ್ನು ನಾನು ತಪ್ಪೊಪ್ಪಿಗೆಯಾಗಿಯೂ ನೋಡುತ್ತೇನೆ ಎಂದು ರಾಜನಾಥ್ ಸಿಂಗ್ ಹೇಳಿದ್ದಾರೆ.
ಫ್ಲೋರಿಡಾದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತಾ ಅಸೀಮ್ ಮುನೀರ್ ಅವರು ವಿಚಿತ್ರವಾದ ಹೋಲಿಕೆಯನ್ನು ಮಾಡಿದ್ದರು. “ಭಾರತವು ಮರ್ಸಿಡಿಸ್ನಂತೆ. ಹೆದ್ದಾರಿಯಲ್ಲಿ ಬರುವ ಮರ್ಸಿಡಿಸ್‌ನೊಂದಿಗೆ ಹೊಳೆಯುತ್ತಿದೆ. ಆದರೆ ನಾವು ಜಲ್ಲಿಕಲ್ಲುಗಳಿಂದ ತುಂಬಿದ ಡಂಪ್ ಟ್ರಕ್. ಒಂದುವೇಳೆ ಟ್ರಕ್ ಕಾರಿಗೆ ಡಿಕ್ಕಿ ಹೊಡೆದರೆ ಯಾರು ಸೋಲುತ್ತಾರೆ? ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ” ಎಂದು ಅವರು ಹೇಳಿದ್ದರು. ಅವರ ಈ ಹೋಲಿಕೆ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಟ್ರೋಲಿಂಗ್‌ಗೆ ಕಾರಣವಾಗಿತ್ತು.