ಹೊಸದಿಗಂತ ಡಿಜಿಟಲ್ ಡೆಸ್ಕ್:
ನೈಋತ್ಯ ಪಾಕಿಸ್ತಾನದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನದ 18 ಅರೆಸೇನಾ ಪಡೆ ಯೋಧರು ಮತ್ತು 24 ಉಗ್ರರು ಹತರಾಗಿದ್ದಾರೆ ಎಂದು ಪಾಕಿಸ್ತಾನದ ಸೇನಾ ಮಾಧ್ಯಮ ವಿಭಾಗ ಶನಿವಾರ ಹೇಳಿಕೆಯಲ್ಲಿ ತಿಳಿಸಿದೆ.
ಬಲೂಚಿಸ್ತಾನದ ಪ್ರಕ್ಷುಬ್ಧ ಪ್ರಾಂತ್ಯದಲ್ಲಿ ಉಗ್ರರು ರಾತ್ರೋರಾತ್ರಿ ರಸ್ತೆ ತಡೆಗಳನ್ನು ಸ್ಥಾಪಿಸಲು ಪ್ರಯತ್ನಿಸಿದ್ದರು ಮತ್ತು ಭದ್ರತಾ ಪಡೆಗಳು ಅವುಗಳನ್ನು ತೆಗೆದುಹಾಕಿದ್ದರಿಂದ ಹೆಚ್ಚಿನ ಸಾವುಗಳು ಸಂಭವಿಸಿವೆ ಎಂದು ಮಿಲಿಟರಿ ತಿಳಿಸಿದೆ. ಏತನ್ಮಧ್ಯೆ ಶನಿವಾರದಂದು ಸೇನೆ ನೆಡೆಸಿದ ಕಾರ್ಯಾಚರಣೆಯಲ್ಲಿ ಹತರಾದ ಉಗ್ರರು ಯಾವ ಗುಂಪಿಗೆ ಸೇರಿದವರು ಎಂಬುದು ತಕ್ಷಣಕ್ಕೆ ತಿಳಿದುಬಂದಿಲ್ಲ.
ಬಲೂಚಿಸ್ತಾನ ಪ್ರಾಂತ್ಯದ ಮಂಗೋಚಾರ ಪಟ್ಟಣದ ಸಮೀಪದಲ್ಲಿ ನಿಶಸ್ತ್ರ ಫ್ರಾಂಟಿಯರ್ ಕಾರ್ಪ್ಸ್ ಅರೆಸೈನಿಕರಿದ್ದ ವಾಹನ ತೆರಳಿದಾಗ 70 ರಿಂದ 80 ಶಸ್ತ್ರಸಜ್ಜಿತ ದಾಳಿಕೋರ ಉಗ್ರರಿಂದ ಗುಂಡಿನ ದಾಳಿಗೆ ಒಳಗಾಯಿತು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.