Saturday, April 1, 2023

Latest Posts

ಪಾಕಿಸ್ತಾನ: ಇಸ್ಲಾಮಾಬಾದ್‌ನಲ್ಲಿ 4.1 ತೀವ್ರತೆಯ ಭೂಕಂಪ; ಯಾವುದೇ ಹಾನಿ ಸಂಭಿವಿಸಿಲ್ಲ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಭಾನುವಾರ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ.

ಇಂದು ಮಧ್ಯಾಹ್ನ 1:24 ಕ್ಕೆ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ರಿಕ್ಟರ್ ಮಾಪಕದಲ್ಲಿ 4.1 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಭೂಕಂಪನಶಾಸ್ತ್ರದ ರಾಷ್ಟ್ರೀಯ ಕೇಂದ್ರ ತಿಳಿಸಿದೆ.

ಭೂಕಂಪದ ಕೇಂದ್ರಬಿಂದು ತಜಕಿಸ್ತಾನದಲ್ಲಿದ್ದು, 150 ಕಿ.ಮೀ ಆಳವಿದೆ ಮತ್ತು 69.65 ಪೂರ್ವ ರೇಖಾಂಶ ಮತ್ತು 38.65 ಉತ್ತರ ಅಕ್ಷಾಂಶವನ್ನು ಹೊಂದಿತ್ತು ಎಂಬ ಮಾಹಿತಿ ಲಭಿಸಿದೆ.

ರಾಷ್ಟ್ರೀಯ ಭೂಕಂಪನ ಮಾನಿಟರಿಂಗ್ ಸೆಂಟರ್ (ಎನ್‌ಎಸ್‌ಎಂಸಿ) ಪ್ರಕಾರ, ಇದುವರೆಗೆ ಯಾವುದೇ ಹಾನಿ ಅಥವಾ ಗಾಯಗಳ ಬಗ್ಗೆ ವರದಿಯಾಗಿಲ್ಲ.

ಶನಿವಾರ ಮುಂಜಾನೆ, ಟರ್ಕಿಯ ಗಡಿಯ ಸಮೀಪ ವಾಯುವ್ಯ ಇರಾನ್‌ನಲ್ಲಿ 5.9 ತೀವ್ರತೆಯ ಭೂಕಂಪ ಸಂಭವಿಸಿತ್ತು, ಕನಿಷ್ಠ ಮೂರು ಜನರು ಸಾವನ್ನಪ್ಪಿದರು ಮತ್ತು 816 ಮಂದಿ ಗಾಯಗೊಂಡರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!