ಪಾಕ್ ಆರ್ಥಿಕ ಬಿಕ್ಕಟ್ಟು: ಛತ್ರ, ಮಾಲ್, ಮಾರ್ಕೆಟ್ ಮುಚ್ಚಲು ಆದೇಶ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಾಕಿಸ್ತಾನದಲ್ಲಿ ಆರ್ಥಿಕ ಬಿಕ್ಕಟ್ಟು ಎದುರಾಗಿದ್ದು, ಮದುವೆ ಹಾಲ್‌ಗಳು, ಮಾಲ್ ಹಾಗೂ ಮಾರ್ಕೆಟ್‌ಗಳನ್ನು ಶೀಘ್ರವೇ ಮುಚ್ಚುವುದಾಗಿ ಪಾಕಿಸ್ತಾನ ಘೋಷಿಸಿದೆ.

ದೇಶದ ಆರ್ಥಿಕತೆಯನ್ನು ಸುಧಾರಿಸಲು ಸರ್ಕಾರ ಶತಪ್ರಯತ್ನ ಮಾಡುತ್ತಿದ್ದು, ಪಾಕ್ ಸರ್ಕಾರದ ಇಂಧನ ಸಂರಕ್ಷಣಾ ಯೋಜನೆ ಅನ್ವಯ ಮದುವೆ ಮನೆ, ಮಾಲ್ ಹಾಗೂ ಮಾರುಕಟ್ಟೆಗಳನ್ನು ಶೀಘ್ರವೇ ಮುಚ್ಚಲಾಗುತ್ತಿದೆ.

ಇಂಧನ ಉಳಿಸಲು ಹಾಗೂ ಆಮದು ಕಡಿಮೆಮಾಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಮಾರುಕಟ್ಟೆಗಳ ಸಮಯಕ್ಕೆ ನಿರ್ಬಂಧ ಹಾಕಲಾಗುತ್ತಿದೆ. ಮಾರುಕಟ್ಟೆ ಹಾಗೂ ಮಾಲ್‌ಗಳು ರಾತ್ರಿ 8:30ಕ್ಕೆ ಮುಚ್ಚಲಾಗುತ್ತದೆ, ಇನ್ನು ಮದುವೆ ಹಾಲ್‌ಗಳು 10 ಗಂಟೆಗೆ ಮುಚ್ಚಲ್ಪಡುತ್ತವೆ. ಇದರಿಂದಾಗಿ 60 ಶತಕೋಟಿ ರೂಪಾಯಿ ಉಳಿಸಬಹುದು ಎಂದು ಪಾಕ್‌ನ ರಕ್ಷಣಾ ಸಚಿವ ಖವಾಜಾ ಆಸಿಫ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!