ಮೇ4ರಂದು ಭಾರತಕ್ಕೆ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಭೇಟಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಮೇ4ರಂದು ಭಾರತಕ್ಕೆ ಭೇಟಿ ನೀಡಲಿದ್ದಾರೆ.

2014 ರಲ್ಲಿ ನವಾಜ್ ಷರೀಫ್ ನಂತರ ಯಾವುದೇ ಪಾಕ್ ನಾಯಕರು ಭಾರತಕ್ಕೆ ಭೇಟಿ ಕೊಟ್ಟಿರಲಿಲ್ಲ. ಅದಾದ ಬಳಿಕ ಭುಟ್ಟೋ ಅವರು ಭಾರತಕ್ಕೆ ಭೇಟಿ ನೀಡುತ್ತಿರುವ ಮೊದಲ ಪಾಕ್ ಸಚಿವರಾಗಿದ್ದಾರೆ.

ಮೇ 4 ಮತ್ತು 5 ರಂದು ಗೋವಾದಲ್ಲಿ ನಡೆಯಲಿರುವ ಶಾಂಘೈ ಸಹಕಾರ ಸಂಸ್ಥೆಯ ವಿದೇಶಾಂಗ ಮಂತ್ರಿಗಳ ಸಭೆಗೆ ಪಾಕಿಸ್ತಾನದ ನಿಯೋಗವನ್ನು ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಮುನ್ನಡೆಸಲಿದ್ದಾರೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವಾಲಯ ತಿಳಿಸಿದೆ.

ಶಾಂಘೈ ಸಹಕಾರ ಸಂಸ್ಥೆ(SCO) ಒಂದು ಪ್ರಾದೇಶಿಕ ರಾಜಕೀಯ ಮತ್ತು ಭದ್ರತಾ ಬ್ಲಾಕ್ ಆಗಿದ್ದು, ಅದರಲ್ಲಿ ರಷ್ಯಾ, ಚೀನಾ, ಭಾರತ ಮತ್ತು ಪಾಕಿಸ್ತಾನ ಸದಸ್ಯ ರಾಷ್ಟ್ರಗಳಾಗಿವೆ. ಗೋವಾದಲ್ಲಿ ವಿದೇಶಾಂಗ ಸಚಿವರ ಸಭೆ ನಡೆಯಲಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!