ಆಸ್ಕರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡ ಚಲನಚಿತ್ರಕ್ಕೆ ಪಾಕ್ ನಿಷೇಧ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಜಾಯ್‌ಲ್ಯಾಂಡ್ ಒಂದು ಪಾಕಿಸ್ತಾನಿ ಚಲನಚಿತ್ರ. ಸೈಮ್ ಸಾದಿಕ್ ಅವರ ಮೊದಲ ಚಿತ್ರ ಪಾಕಿಸ್ತಾನದಲ್ಲಿ ಸಂಚಲನ ಮೂಡಿಸಿದೆ. ಇದುವರೆಗೂ ಅನೇಕ ಪ್ರೇಮಕಥೆಗಳನ್ನು ನೋಡಿರುತ್ತೇವೆ ಇದು ಎಲ್ಲಕ್ಕಿಂತ ಭಿನ್ನ. ಯುವಕ ಮತ್ತು ತೃತೀಯಲಿಂಗಿಗಳ ನಡುವಿನ ಪ್ರೇಮಕಥೆಯೇ ಚಿತ್ರದ ಕಥಾವಸ್ತು. ಪಾಕಿಸ್ತಾನದಿಂದ 2023 ರ ಆಸ್ಕರ್‌ಗೆ ಅಧಿಕೃತವಾಗಿ ಪ್ರವೇಶಿಸಿದ ಚಲನಚಿತ್ರವನ್ನು ಬಿಡುಗಡೆಗೆ ಒಂದು ವಾರದ ಮೊದಲೇ ಪಾಕಿಸ್ತಾನದಲ್ಲಿ ನಿಷೇಧಿಸಲಾಗಿದೆ.

ಈ ಚಿತ್ರದಲ್ಲಿ ಡ್ಯಾನ್ಸರ್ ಆಗಿ ಕೆಲಸ ಮಾಡುವ ಯುವಕನೊಬ್ಬ ಸ್ಟೇಜ್ ಡ್ಯಾನ್ಸರ್ ಆಗಿ ಕೆಲಸ ಮಾಡುವ ತೃತೀಯಲಿಂಗಿಯೊಬ್ಬಳನ್ನು ಪ್ರೀತಿಸುತ್ತಾನೆ. ಆದರೆ ಇವರ ಪ್ರೀತಿಯನ್ನು ಸಮಾಜ ಒಪ್ಪಿಕೊಳ್ಳದ ಕಾರಣ ಅವರು ಎದುರಿಸುವ ಸಮಸ್ಯೆಗಳೇನು ಎಂಬುದು ಉಳಿದ ಸಿನಿಮಾ.

ಇದರ ಜೊತೆಗೆ ಪಾಕಿಸ್ತಾನದಲ್ಲಿ ಸಲಿಂಗಕಾಮ ಕಾನೂನು ಅಪರಾಧವಾಗಿದೆ. ಇದರಿಂದ ಅಲ್ಲಿನ ಸರ್ಕಾರ ಸಿನಿಮಾ ಬಹಿಷ್ಕರಿಸುವ ನಿರ್ಧಾರ ಕೈಗೊಂಡಿದೆ. ಏತನ್ಮಧ್ಯೆ, ಕೇನ್ಸ್ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾದ ಮೊದಲ ಪಾಕಿಸ್ತಾನಿ ಚಿತ್ರವಾಗಿ ‘ಜಾಯ್‌ಲಾಂಡ್‌’ ಇತಿಹಾಸವನ್ನು ಸೃಷ್ಟಿಸಿತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!