ಕೋವಿಡ್‌ ಸಾಂಕ್ರಾಮಿಕವು ದೊಡ್ಡ ದೊಡ್ಡ ಕಂಪನಿಗಳನ್ನೂ ಬೇಸ್ತು ಬೀಳಿಸಿದ್ದು ಹೀಗೆ !

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಸಂದರ್ಭದಲ್ಲಿ ವರ್ಕ್‌ ಫ್ರಂ ಹೋಮ್‌ ಇತ್ಯಾದಿಗಳ ಮೂಲಕ ಕೆಲಸ ನಿರ್ವಹಿಸಿ ಸಾಂಕ್ರಾಮಿಕದ ಸಂದರ್ಭದಲ್ಲಿಯೂ ಯಶಸ್ವಿಯಾಗಿ ಐಟಿ ಕಂಪನಿಗಳು ಕಾರ್ಯನಿರ್ವಹಿಸುತ್ತವೆ ಎಂಬ ಹೆಗ್ಗಳಿಕೆ ಗಳಿಸಿಕೊಂಡಿತ್ತು ಐಟಿ ಉದ್ಯಮ. ಆದರೆ ಇತ್ತೀಚಿನ ಬೆಳವಣಿಗೆಗಳನ್ನು ಗಮನಿಸಿದರೆ ಅದು ಸುಳ್ಳಾಗಿದೆ.ಏರುತ್ತಿರುವ ಹಣದುಬ್ಬರ, ಹೆಚ್ಚುತ್ತಿರುವ ಬಡ್ಡಿದರಗಳು, ಬಂಡವಾಳ ಹೂಡಿಕೆಯಲ್ಲಿನ ಹಿಂಜರಿತಗಳು ದೊಡ್ಡ ದೊಡ್ಡ ಕಂಪನಿಗಳೂ ದಕ್ಷತೆಯೆಡೆಗೆ ಹೆಚ್ಚಿನ ಗಮನ ಹರಿಸುವಂತೆ ಮಾಡಿವೆ.

ಕೋವಿಡ್‌ ಸಂದರ್ಭದಲ್ಲಿ ಪರಿಣಾಮಕಾರಿಯಾಗಿ ಹೆಚ್ಚು ಉತ್ಪಾದಕತೆಯೊಂದಿಗೆ ಕಾರ್ಯನಿರ್ವಹಿಸಿದ ಆತ್ಮವಿಶ್ವಾಸದಲ್ಲಿದ್ದ ಕಂಪನಿಗಳೀಗ ಉದ್ಯೋಗಗಳಿಗೆ ಕತ್ತರಿ ಪ್ರಯೋಗ ಮಾಡುತ್ತಿವೆ. ಗೂಗಲ್‌, ಮೆಟಾ, ಅಮೇಜಾನ್‌ ಹೀಗೆ ದೊಡ್ಡ ದೊಡ್ಡ ಐಟಿ ದೈತ್ಯರೂ ಕೂಡ ಇದರಿಂದ ಹೊರತಾಗಿಲ್ಲ. ನಿನ್ನೆಯಷ್ಟೇ ಅಮೇಜಾನ್‌ 10ಸಾವಿರಕ್ಕೂ ಅಧಿಕ ಉದ್ಯೋಗಿಗಳನ್ನು ಹೊರಹಾಕಿದೆ. ಫೆಸ್ಬುಕ್‌, ಇನ್ಸ್ಟಾಗ್ರಾಂಗಳ ಮಾತೃಸಂಸ್ಥೆ ಮೆಟಾ ಕೂಡ 13 ಶೇಕಡಾದಷ್ಟು ಉದ್ಯೋಗಿಗಳನ್ನು ಹೊರಹಾಕುವುದಾಗಿ ಹೇಳಿದೆ. ಟ್ವೀಟರ್‌ ಉದ್ಯೋಗಿಗಳನ್ನು ಹೊರಹಾಕಿರುವುದಂತೂ ತಿಳಿದಿರುವ ಸಂಗತಿಯೇ.

ಈ ಉದ್ಯೋಗ ಕಡಿತಗಳ ಕುರಿತು ಮೆಟಾ ಮುಖ್ಯಸ್ಥ ಮಾರ್ಕ್‌ ಜುಕರ್‌ ಬರ್ಗ್‌ ಹೇಳುವುದೇನೆಂದರೆ “ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಾರಂಭಗೊಂಡ ವೇಗ ವರ್ಧನೆಯು ಸಾಂಕ್ರಾಮಿಕ ಮುಗಿದನಂತರವೂ ಮುಂದುವರೆಯುತ್ತದೆ ಎಂದು ಹಲವರು ಭವಿಷ್ಯ ನುಡಿದಿದ್ದರೂ. ನಾನೂ ಕೂಡ ಹಾಗೆಯೇ ಅಂದುಕೊಂಡಿದ್ದೆ ಆದರೆ ಈಗ ಆ ನೀರಿಕ್ಷೆ ಸುಳ್ಳಾಗಿದೆ”

ಕೊವಿಡ್‌ ನಲ್ಲಿನ ವೇಗವನ್ನು ಗಮನಿಸಿ ಮೆಟಾವು ಇನ್ನಷ್ಟು ವಿಸ್ತರಿಸಲು ಯೋಜಿಸಿತ್ತು. ಇದಕ್ಕೆಂದು ಸಾವಿರಾರು ಉದ್ಯೋಗಿಗಳ ನೇಮಕವನ್ನೂ ಮಾಡಿಕೊಂಡಿತ್ತು. ಡಿಸೆಂಬರ್ 2020 ರ ಅಂತ್ಯದಿಂದ ಸೆಪ್ಟೆಂಬರ್ 2022 ರವರೆಗೆ 28,396 ನಿವ್ವಳ ಉದ್ಯೋಗಿಗಳನ್ನು ಸೇರಿಸಿಕೊಂಡಿತ್ತು. ಆದರೀಗ ಈ ಉದ್ಯೋಗಿಗಳಿಗೆ ಮನೆಯ ದಾರಿ ತೋರಿಸುತ್ತಿದೆ.

ಗೂಗಲ್‌ ಮೈಕ್ರೋಸಾಫ್ಟ್‌ ಗಳೂ ಕೂಡ ಉತ್ಪಾದಕತೆಯ ಮೇಲೆ ಗಮನಹರಿಸುವುದಾಗಿ ಹೇಳಿದ್ದು 3ನೇ ತ್ರೈಮಾಸಿಕಕ್ಕಿಂತ 4 ತ್ರೈಮಾಸಿಕದಲ್ಲಿ ಕಂಪನಿಯ ಹೆಡ್‌ ಕೌಂಟ್‌ ಕಡಿಮೆಯಾಗಲಿದೆ. ಅರ್ಧಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿ ನೇಮಕಾತಿಗಳಾಗಬಹುದು ಎಂದು ಗೂಗಲ್‌ ಮುಖ್ಯಸ್ಥ ಸುಂದರ್‌ ಪಿಚ್ಚೈ ಹೇಳಿದ್ದಾರೆ ಎನ್ನಲಾಗಿದೆ.

ಹೀಗಾಗಿ ಕೋವಿಡ್‌ ಕಾಲಘಟ್ಟದಲ್ಲಿನ ವೇಗದ ಆಧಾರದಲ್ಲಿ ಹೆಚ್ಚು ವಿಸ್ತರಣೆ ಮಾಡಲು ಹೊರಟ ಕಂಪನಿಗಳಿಗೀಗ ಆರ್ಥಿಕ ಕುಸಿತದ ಭೀತಿ ಎದುರಾಗಿದೆ. ಸಾಂಕ್ರಾಮಿಕದ ಸಂದರ್ಭದವನ್ನು ತಪ್ಪಾಗಿ ಗ್ರಹಿಸಿದವರೆಲ್ಲ ಈಗ ಬೇಸ್ತು ಬಿದ್ದಿದ್ದಾರೆ ಎನ್ನಬಹುದೇನೋ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!