ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನ ಆಕ್ರಮಿತ ಕಾಶ್ಮೀರವನ್ನು ಹಿಂಪಡೆಯುವ ರಾಜನಾಥ್ ಸಿಂಗ್ ಅವರ ಪ್ರತಿಜ್ಞೆಗೆ ಪ್ರತಿಕ್ರಿಯಿಸಿದ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಫಾರೂಕ್ ಅಬ್ದುಲ್ಲಾ, ನೆರೆಯ ದೇಶವು ಬಳೆ ತೊಟ್ಟುಕೊಂಡಿಲ್ಲ, ಭಾರತಕ್ಕೆ ಹಾನಿ ಮಾಡುವ ಪರಮಾಣು ಬಾಂಬ್‌ಗಳನ್ನು ಹೊಂದಿದೆ ಎಂದು ಹೇಳಿದ್ದರು.
ಫಾರೂಕ್ ಅಬ್ದುಲ್ಲಾ ಮತ್ತು ಮಣಿಶಂಕರ್ ಅಯ್ಯರ್ ಹೇಳಿಕೆ ಬಗ್ಗೆ ಇಂಡಿಯಾ ಬಣ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ ಹಣದ ಕೊರತೆಯಿರುವ ಪಾಕಿಸ್ತಾನ ಬಳೆ ತೊಟ್ಟಿಲ್ಲ ಅಂದರೆ ಭಾರತ ಅವರಿಗೆ ಬಳೆ ತೊಡಿಸುತ್ತದೆ ಎಂದು ಹೇಳಿದ್ದಾರೆ.
ಪಾಕಿಸ್ತಾನ್ ನೆ ಚೂಡಿಯಾಂ ನಹೀ ಪೆಹನಿ ಹೈ, ಅರೆ ಭಾಯಿ ಪೆಹನಾ ದೇಂಗೆ. ಅಬ್ ಉನ್ಕೋ ಆಟಾ ಭಿ ಚಾಹಿಯೇ, ಉನ್ಕೇ ಪಾಸ್ ಬಿಜ್ಲಿ ಭಿ ನಹೀ ಹೈ, ಅಬ್ ಹಮೇನ್ ಮಾಲೂಮ್ ಪಡಾ ಉನ್ಕೇ ಪಾಸ್ ಚೂಡಿಯನ್ ಭೀ ನಹೀ ಹೈ ( ಪಾಕಿಸ್ತಾನ ಬಳೆ ತೊಟ್ಟಿಲ್ವಾ? ಇರಲಿ ಪರವಾಗಿಲ್ಲ ನಾವು ತೊಡಿಸುತ್ತೇವೆ, ಅವರ ಬಳಿ ಊಟವೂ ಇಲ್ಲ, ಕರೆಂಟ್ ಕೂಡ ಇಲ್ಲ, ಈಗ ಹಾಕಿಕೊಳ್ಳೋಕೆ ಬಳೆಗಳೂ ಇಲ್ಲ ಅಂತ ಗೊತ್ತಾಗಿದೆ) ಎಂದು ಪ್ರಧಾನಿ ಮೋದಿ ವ್ಯಂಗ್ಯ ಮಾಡಿದ್ದಾರೆ.