ಪಂಜಾಬ್‌ ಗಡಿಯಲ್ಲಿ ಬಿಎಸ್‌ಎಫ್‌ ಗುಂಡಿನ ದಾಳಿ: ಪಾಕ್‌ ಒಳನುಸುಳುಕೋರನ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಪಂಜಾಬ್ ರಾಜ್ಯದ ಪಠಾಣ್ ಕೋಟ್ ನ ಗಡಿ ಭಾಗದಲ್ಲಿ ಒಳನುಸುಳಲು ಯತ್ನಿಸುತ್ತಿದ್ದ ಪಾಕಿಸ್ತಾನಿ ಒಳನುಸುಳುಕೋರನೊಬ್ಬನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಗುಂಡಿಕ್ಕಿ ಕೊಂದಿದೆ. ನುಸುಳುಕೋರ ಗಡಿ ಬೇಲಿಯ ಸಮೀಪಕ್ಕೆ ಬರುತ್ತಿದ್ದಂತೆ, ಸೈನಿಕರು ಗುಂಡು ಹಾರಿಸಿದ್ದಾರೆ.

ಪಠಾಣ್‌ಕೋಟ್‌ನ ಸಿಂಬಲ್ ಸಾಕೋಲ್ ಗ್ರಾಮದ ಬಳಿ ಮಧ್ಯರಾತ್ರಿ 12.30ರ ಸುಮಾರಿಗೆ ಗಡಿ ಭದ್ರತಾ ಪಡೆಗಳು ಕೆಲವು ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ್ದಾರೆ.
ಕೂಡಲೇ ಭದ್ರತಾ ಪಡೆಗಳು ಕಾರ್ಯಾಚರಣೆ ಆರಂಭಿಸಿದ್ದು, ಗುಂಡಿನ ದಾಳಿ ನಡೆಸಿ ಓರ್ವನನ್ನು ಹತ್ಯೆ ಮಾಡಲಾಗಿದೆ.

ಇತ್ತೀಚೆಗೆ ಗಡಿಯಲ್ಲಿ ನುಸುಳುಕೋರರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಿದ್ದು, ಅವರನ್ನು ತಡೆಯುವಲ್ಲಿ ಸೇನೆ ಸಫಲವಾಗಿದೆ. ಆಗಸ್ಟ್ 11 ರಂದು ಕೂಡ ಇಂತಹದ್ದೇ ಒಂದು ಘಟನೆ ನಡೆದಿದ್ದು, ಗಡಿ ಭದ್ರತಾ ಪಡೆ(BSF)ಯ ಯೋಧರು ಪಂಜಾಬ್​ನ ತರ್ನ್​ ತರನ್ ಜಿಲ್ಲೆಯ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನ ಒಳನುಸುಳುಕೋರನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಅದಾದ ಮೂರು ದಿನಗಳಲ್ಲಿ ಅಂಥಹದ್ದೇ ಮತ್ತೊಂದು ಘಟನೆ ನಡೆದಿದೆ ಎಂದು ಬಿಎಸ್ಎಫ್ ಯೋಧರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!