ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಾಡಬಾರದ ತಪ್ಪು ಮಾಡಿ ಇದೀಗ ಪಾಕಿಸ್ತಾನ ಭಾರತಕ್ಕೆ ಹೆದರಿ ಕುಳಿತಿದೆ. ಮುಂದಿನ 24-36 ಗಂಟೆಯೊಳಗೆ ಭಾರತ ನಮ್ಮ ಮೇಲೆ ದಾಳಿ ನಡೆಸಬಹುದು ಎಂದು ಪಾಕಿಸ್ತಾನ ಸಚಿವ ಅತ್ತೌಲ್ಲಾ ತರಾರ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಇದೀಗ ಭಾರತ ಏನು ಮಾಡಬಹುದು ಎನ್ನುವ ಭಯದಲ್ಲಿ ಪಾಕಿಸ್ತಾನವಿದ್ದು, ಮುಂದಿನ 36 ಗಂಟೆಯೊಳಗೆ ದಾಳಿ ನಡೆಸಬಹುದು ಎಂದು ಪಾಕಿಸ್ತಾನ ಸೇನೆಯೊಳಗೆ ಅವ್ಯವಸ್ಥೆಯನ್ನು ಹುಟ್ಟುಹಾಕಿದೆ.
ಪಾಕಿಸ್ತಾನ ಲೆಫ್ಟಿನೆಂಟ್ ಜನರಲ್ ಉಮರ್ ಅಹ್ಮದ್ ಬುಖಾರಿ ಅವರು ಕಳೆದ 72 ಗಂಟೆಗಳಲ್ಲಿ 250 ಅಧಿಕಾರಿಗಳು ಸೇರಿದಂತೆ 1,450 ಸೈನಿಕರು ರಾಜೀನಾಮೆ ನೀಡಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ಪಹಲ್ಗಾಮ್ ದಾಳಿಯ ನಂತರ, ಸುಮಾರು 5,000 ಸೈನಿಕರು ಮತ್ತು ಅಧಿಕಾರಿಗಳು ಪಾಕಿಸ್ತಾನಿ ಸೇನೆಯನ್ನು ತೊರೆದಿದ್ದಾರೆ ಎಂದು ತಿಳಿಸಿದ್ದಾರೆ.