ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಪಾಕಿಸ್ತಾನ ಮ್ಯಾಚ್‌ನಲ್ಲಿ ಪಾಕಿಸ್ತಾನ ಸೋಲು ಕಂಡಿದ್ದು, ಇದರಿಂದ ಪಾಕಿಸ್ತಾನದ ಅಭಿಮಾನಿಯೋರ್ವ ಕಣ್ಣೀರಿಟ್ಟಿದ್ದಾನೆ.
ಈತ ಮ್ಯಾಚೊಂದರ ಟಿಕೆಟ್ ಖರೀದಿಸಲು ಬರೋಬ್ಬರಿ 8.4 ಲಕ್ಷ ರೂಪಾಯಿಯನ್ನು ಖರ್ಚು ಮಾಡಿದ್ದಾನೆ. ಇಷ್ಟೊಂದು ವೆಚ್ಚ ಮಾಡಿ ತಾನು ಮ್ಯಾಚ್ ನೋಡುವುದಕ್ಕೆ ಹೋದರೂ ಮ್ಯಾಚ್ ಸೋತಿತ್ತಲ್ಲ ಎಂದು ಬೇಸರದಿಂದ ಆತ ಕಣ್ಣೀರಾಕಿದ್ದಾನೆ.
ಭಾನುವಾರ ನ್ಯೂಯಾರ್ಕ್‌ನ ನಸ್ಸೌ ಕೌಂಟಿ ಇಂಟರ್‌ನ್ಯಾಶನಲ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಭಾರತ ಪಾಕಿಸ್ತಾನ ಮಧ್ಯೆ ನಡೆದ ಹೈವೋಲ್ಟೇಜ್ ಪಂದ್ಯಾವಳಿಯಲ್ಲಿ ಭಾರತ ವಿರುದ್ಧ ಪಾಕಿಸ್ತಾನ ಕೇವಲ ಆರು ರನ್‌ಗಳ ಸೋಲು ಕಂಡಿತ್ತು. 19 ಓವರ್‌ಗಳಲ್ಲಿ 119 ರನ್ ಬಾರಿಸುವಷ್ಟರಲ್ಲಿ ಟೀಂ ಇಂಡಿಯಾವನ್ನು ಕಟ್ಟಿ ಹಾಕಿದ ಪಾಕ್ ಪಡೆ ಬ್ಯಾಟ್ಸಮನ್‌ಗಳ ವೈಫಲ್ಯದಿಂದಾಗಿ ಕೇವಲ 120 ರನ್‌ಗಳ ಗುರಿಯನ್ನು ಬೆನ್ನತ್ತಲು ವಿಫಲವಾಗಿತ್ತು.
ಇದರಿಂದ ಮ್ಯಾಚ್ ನೋಡುವುದಕ್ಕಾಗಿ ಟ್ರಾಕ್ಟರ್ ಮಾರಿ ಲಕ್ಷಾಂತರ ರೂ ಖರ್ಚು ಮಾಡಿ ಸ್ಟೇಡಿಯಂಗೆ ಬಂದಿದ್ದ ಪಾಕಿಸ್ತಾನದ ಅಭಿಮಾನಿಯೋರ್ವ ಮಾತ್ರ ತೀವ್ರ ಬೇಸರಗೊಂಡಿದ್ದನು.
ಚಾನೆಲೊಂದರ್ ಜೊತೆ ಮಾತನಾಡಿದ ಈ ಪಾಕ್ ಅಭಿಮಾನಿ, ತಾನು ಸ್ಟೇಡಿಯಂನಲ್ಲೇ ಲೈವ್ ಆಗಿ ಮ್ಯಾಚ್ ನೋಡುವುದಕ್ಕಾಗಿ ಟಿಕೆಟ್ ಖರೀದಿಸುವುದಕ್ಕೆ ನನ್ನ ಟ್ರ್ಯಾಕ್ಟರ್‌ನ್ನು ಮಾರಿದೆ. (ಈ ಟಿಕೆಟ್ ಮೊತ್ತ 3000 ಯುಎಸ್‌ಡಿ ಅಂದರೆ ಪಾಕಿಸ್ತಾನದ ರೂಪಾಯಿಗೆ ಪರಿವರ್ತಿಸುವುದಾದರೆ 840,526.93). ಆದರೆ ಪಾಕಿಸ್ತಾನ ಈ ಪಂದ್ಯವನ್ನು ಹೀಗೆ ಆಡುವುದು ಎಂದು ನಾನು ಊಹೆಯೂ ಮಾಡಿರಲಿಲ್ಲ ಎಂದು ಅಭಿಮಾನಿ ಹತಾಶೆ ವ್ಯಕ್ತಪಡಿಸಿದ್ದಾರೆ.
ಭಾರತ ತಂಡ ಕಲೆ ಹಾಕಿದ ಮೊತ್ತ ನೋಡಿದಾಗ ನಾವು ಭಾರತ ಗೆಲ್ಲುವುದು ಎಂದು ಭಾವಿಸಿರಲಿಲ್ಲ, ಆಟ ನಮ್ಮ ಕೈಯಲ್ಲೇ ಇತ್ತು. ಆದರೆ ಬಾಬರ್ ಅಜಂ ಔಟ್ ಆಗ್ತಿದ್ದಂಗೆ ಜನರ ಹೃದಯ ಒಡೆಯಿತು. ನಾನು ಭಾರತದ ಕ್ರಿಕೆಟ್ ಅಭಿಮಾನಿಗಳಿಗೆ ಅಭಿನಂದನೆ ತಿಳಿಸುತ್ತೇನೆ ಎಂದು ಬೇಸರದಿಂದಲೇ ಹೇಳಿದ್ದಾರೆ.