ಪಾಕ್‌ ನಲ್ಲಿ ಕುಟುಂಬ ರಾಜಕಾರಣದ ದರ್ಬಾರ್: ಅಪ್ಪ ಪ್ರಧಾನಿ, ಮಗ ಸಿಎಂ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಕೊನೆಯ ಕ್ಷಣಗಳಲ್ಲಿ ನಡೆದ ರಾಜಕೀಯ ಹೈಡ್ರಾಮಗಳ ನಡುವೆಯೂ ಪಾಕಿಸ್ತಾನದ ನೂತನ ಪ್ರಧಾನಿ ಶೆಹಬಾಜ್ ಷರೀಫ್ ಪುತ್ರ ಹಮ್ಜಾ ಶೆಹಬಾಜ್ ಪಂಜಾಬ್‌ ಪ್ರಾಂತ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇದರಿಂದಾಗಿ ಪಾಕ್‌ ನಲ್ಲಿ ಮತ್ತೊಮ್ಮೆ ಕುಟುಂಬ ರಾಜಕಾರಣ ಮೇಲ್ಪಂಕ್ತಿಗೆ ಬಂದಿದೆ.
ಇಲ್ಲಿನ ಗವರ್ನರ್ ಹೌಸ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 47 ವರ್ಷದ ಹಮ್ಜಾ ಅವರಿಗೆ ನ್ಯಾಶನಲ್ ಅಸೆಂಬ್ಲಿ ಸ್ಪೀಕರ್ ರಾಜಾ ಪರ್ವೈಜ್ ಅಶ್ರಫ್ ಅವರು ಪ್ರಮಾಣ ವಚನ ಬೋಧಿಸಿದರು.
ಇದಕ್ಕಿಂತ ಮುಂಚೆ ರಾಜಕೀಯ ಹೈಡ್ರಾಮವೇ ನಡೆದಿತ್ತು. ಗವರ್ನರ್ ಒಮರ್ ಸರ್ಫ್ರಾಜ್ ಚೀಮಾ ಅವರು ಮುಖ್ಯಮಂತ್ರಿಯಾಗಿ ಹಮ್ಜಾ ಆಯ್ಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದರು. ನಿರ್ಗಮಿತ ಮುಖ್ಯಮಂತ್ರಿ ಉಸ್ಮಾನ್ ಬುಜ್ದಾರ್ ಅವರ ರಾಜೀನಾಮೆಯನ್ನು ತಿರಸ್ಕರಿಸಿ ಅವರ ಸಂಪುಟವನ್ನು ಪುನಃಸ್ಥಾಪಿಸಿದರು. ಹಾಗೂ ಹಮ್ಜಾ ಆಯ್ಕೆಯನ್ನು ಸಾಂವಿಧಾನಿಕವಾಗಿ ಅಸಿಂಧು ಎಂದು ಘೋಷಿಸಿದರು.
ಅಸಾಂವಿಧಾನಿಕ ರೀತಿಯಲ್ಲಿ ನಕಲಿ ಪ್ರಮಾಣ ವಚನದ ನಾಟಕ ನಡೆಸಲಾಗಿದೆ. ಮುಖ್ಯ ನ್ಯಾಯಮೂರ್ತಿಗಳು ಈ ಬಗ್ಗೆ ಗಮನಹರಿಸಬೇಕು, ಈ ಕುರಿತು ರಾಷ್ಟ್ರಪತಿ ಆರಿಫ್ ಅಲ್ವಿ ಅವರಿಗೂ ಪತ್ರ ಬರೆಯುವುದಾಗಿ ತಿಳಿಸಿದರು.
ಪಿಟಿಐ ನೇತೃತ್ವದ ಒಕ್ಕೂಟವು ತನ್ನ 26 ಶಾಸಕರು ಪಾಕಿಸ್ತಾನ್ ಮುಸ್ಲಿಂ ಲೀಗ್-ನವಾಜ್ (PML-N) ಗೆ ಪಕ್ಷಾಂತರಗೊಂಡು ಮುಖ್ಯಮಂತ್ರಿಯಾಗಿ ಹಮ್ಜಾ ಆಯ್ಕೆಗೆ ಮತ ಹಾಕಿದ ನಂತರ ಚುನಾವಣೆಯನ್ನು ಬಹಿಷ್ಕರಿಸಿತ್ತು

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!