ಮೋದಿ ‘ಮಾಸ್ಟರ್​ ಸ್ಟ್ರೋಕ್​’ಗೆ ಪಾಕ್ ತತ್ತರ: ಡೀಸೆಲ್‌, ಜೆಟ್‌ ಇಂಧನ ಸಂಗ್ರಹಕ್ಕೆ ಸೂಚನೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ದಾಳಿಯ ಬಳಿಕ ಭಾರತ ಯಾವಗ ಬೇಕಾದರೂ ತನ್ನ ಮೇಲೆ ದಾಳಿ ಮಾಡಬಹುದು ಎನ್ನುವ ಆತಂಕ ಪಾಕಿಸ್ತಾನಕ್ಕಿದೆ. ಈ ಹಿನ್ನಲೆಯಲ್ಲಿ ಹೈಸ್ಪೀಡ್‌ ಡೀಸೆಲ್‌ ಹಾಗೂ ಜೆಟ್‌ ಇಂಧನವನ್ನು ಸ್ಟಾಕ್‌ ಇರಿಸಿಕೊಳ್ಳುವಂತೆ ತೈಲ ಕಂಪನಿಗಳಿಗೆ ಸೂಚನೆ ನೀಡಿದೆ.

ತುರ್ತು ಸಂದರ್ಭದಲ್ಲಿ ಪೂರೈಕೆಯಲ್ಲಿ ಅಡಚಣೆ ಉಂಟಾಗುವುದನ್ನು ತಪ್ಪಿಸಲು ಪೆಟ್ರೋಲಿಯಂ ಆಮದುಗಳನ್ನು ತ್ವರಿತಗೊಳಿಸಲು ಮತ್ತು ಹೆಚ್ಚಿನ ಮೀಸಲು ಕಾಯ್ದುಕೊಳ್ಳಲು ತೈಲ ನಿರ್ದೇಶನಾಲಯವು PSO ಮತ್ತು ಇತರ ಆಮದುದಾರರಿಗೆ ಪಾಕ್ ಸೂಚನೆ ನೀಡಿದೆ.

ತೈಲ ಸಂಸ್ಕರಣಾಗಾರಗಳು ನಿರ್ದಿಷ್ಟವಾಗಿ ಹೈಸ್ಪೀಡ್‌ ಡೀಸೆಲ್ ಮತ್ತು ಜೆಟ್ ಇಂಧನವನ್ನು ಸಾಕಷ್ಟು ಪ್ರಮಾಣದಲ್ಲಿ ಸ್ಟಾಕ್‌ ಇರಿಸಿಕೊಳ್ಳುವಂತೆ ಪಾಕ್ ಸೂಚನೆ ನೀಡಿತ್ತು, ನಮ್ಮ ಬಳಿ ವಾಯುಯಾನ ಮತ್ತು ಸಾರಿಗೆ ದರ್ಜೆಯ ಇಂಧನಗಳು ಸೇರಿದಂತೆ ಪ್ರಸ್ತುತ ಇಂಧನ ದಾಸ್ತಾನು ಸಾಕಷ್ಟಿದೆ ಎಂದು ಪೆಟ್ರೋಲಿಯಂ ಅಧಿಕಾರಿಗಳು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here