ಪ್ರತೀಕಾರ ಭೀತಿಯಲ್ಲಿ ತತ್ತರಿಸಿದ ಪಾಕ್: ಪಿಒಕೆಯಲ್ಲಿ ಸಾವಿರಕ್ಕೂ ಹೆಚ್ಚು ಮದರಸಾಗಳು ಬಂದ್

 ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಪಹಲ್ಗಾಮ್ ಉಗ್ರ ದಾಳಿಯ ಬಳಿಕ ಕಂಡು ಕೇಳರಿಯದ ರೀತಿಯಲ್ಲಿ ಭಾರತದಿಂದ ಪ್ರತೀಕಾರದ ಭೀತಿ ಎದುರಿಸುತ್ತಿರುವ ಪಾಕ್, ಈಗ ಪಾಕ್ ಆಕ್ರಮಿತ ಕಾಶ್ಮೀರದ ನೆಲದ ಗಡಿ ಉದ್ವಿಗ್ನತೆ ಹಿನ್ನಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಬರೋಬ್ಬರಿ ಒಂದು ಸಾವಿರಕ್ಕೂ ಹೆಚ್ಚು ಮದರಸಾಗಳನ್ನು ಮುಚ್ಚಿದೆ.

ಮುಜಾಫಾರಾಬಾದ್ ಮತ್ತು ನಿಯಂತ್ರಣ ರೇಖೆಯ ಉದ್ದಕ್ಕೂ ಇರುವ ಪಟ್ಟಣಗಳಲ್ಲಿ, ಶಾಲಾ ಅಂಗಳಗಳನ್ನು ತಾತ್ಕಾಲಿಕ ತರಬೇತಿ ಶಿಬಿರಗಳಾಗಿ ಪರಿವರ್ತಿಸಲಾಗಿದೆ. ಇಲ್ಲೀಗ 11 ವರ್ಷ ವಯಸ್ಸಿನ ಮಕ್ಕಳು ಅಗ್ನಿಶಾಮಕಗಳನ್ನು ಹೇಗೆ ಬಳಸುವುದು, ಪ್ರಥಮ ಚಿಕಿತ್ಸೆ ನೀಡುವುದು ಹೇಗೆ, ಗಾಯಗೊಂಡ ಸಹಪಾಠಿಗಳನ್ನು ಸ್ಟ್ರೆಚರ್‌ಗಳಲ್ಲಿ ಸಾಗಿಸುವುದು ಹೇಗೆ ಎಂದು ಕಲಿಯುತ್ತಿದ್ದಾರೆ.

ನಿಯಂತ್ರಣ ರೇಖೆಯುದ್ದಕ್ಕೂ 13 ಕ್ಷೇತ್ರಗಳಲ್ಲಿ ಎರಡು ತಿಂಗಳವರೆಗೆ ಆಹಾರ ಸರಬರಾಜನ್ನು ಸಂಗ್ರಹಿಸಲು ಸೂಚನೆಗಳನ್ನು ನೀಡಲಾಗಿದೆ ಎಂದು ಪಿಒಕೆ ಪ್ರಧಾನಿ ಚೌಧರಿ ಅನ್ವರ್ ಉಲ್ ಹಕ್ ಸ್ಥಳೀಯ ವಿಧಾನಸಭೆಯ ಅಧಿವೇಶನದಲ್ಲಿ ಹೇಳಿದ್ದಾರೆ. ಆಹಾರ, ಔಷಧಿಗಳು ಮತ್ತು ಇತರ ಎಲ್ಲಾ ಮೂಲಭೂತ ಅವಶ್ಯಕತೆಗಳ ವಿತರಣೆಯನ್ನು ಖಚಿತಪಡಿಸಿಕೊಳ್ಳಲು ಪಿಒಕೆ ಸರ್ಕಾರವು ಒಂದು ಬಿಲಿಯನ್ ರೂಪಾಯಿಗಳ ತುರ್ತು ನಿಧಿ ಸ್ಥಾಪಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!