Thursday, June 1, 2023

Latest Posts

ಪಾಕಿಸ್ತಾನದ ಶಾಲೆಯಲ್ಲಿ ಗುಂಡಿನ ದಾಳಿ: 8 ಶಿಕ್ಷಕರ ಹತ್ಯೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಪಾಕಿಸ್ತಾನದ ವಾಯುವ್ಯ ಭಾಗದಲ್ಲಿರುವ ಶಾಲೆಯಲ್ಲಿ ಗುಂಡಿನ ದಾಳಿ ನಡೆದಿದ್ದು, ಏಳು ಶಿಕ್ಷಕರು ಹತ್ಯೆಗೀಡಾಗಿದ್ದಾರೆ.

ಅಫ್ಘಾನಿಸ್ತಾನದೊಂದಿಗೆ ಗಡಿ ಹಂಚಿಕೊಂಡಿರುವ ಕರಾಮ್ ಬುಡಕಟ್ಟು ಜಿಲ್ಲೆಯ ಅನಾಡೋಲು ಎಂಬಲ್ಲಿನ ಪರಚಿನಾರ್​ ಪಟ್ಟಣದ ಸರ್ಕಾರಿ ಹೈಸ್ಕೂಲ್​ವೊಂದರಲ್ಲಿ ಘಟನೆ ನಡೆದಿದೆ. ಈ ಗುಂಡಿನ ದಾಳಿ ನಡೆಯುವುದಕ್ಕೂ ಮೊದಲು ಇನ್ನೊಂದು ದಾಳಿ ನಡೆದಿತ್ತು. ಅದರಲ್ಲಿ ಒಬ್ಬ ಶಿಕ್ಷಕನ ಹತ್ಯೆಯಾಗಿತ್ತು. ದಾಳಿಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಉಗ್ರರ ಕೈವಾಡ ಇರಲೂ ಬಹುದು ಎಂದು ಪೊಲೀಸರು ಹೇಳಿದ್ದಾರೆ.

ಈ ಎರಡೂ ದಾಳಿಯಲ್ಲಿ ಕೊಲ್ಲಲ್ಪಟ್ಟ ಶಿಕ್ಷಕರೆಲ್ಲರೂ (8 ಮಂದಿ ಶಿಕ್ಷಕರು) ಶಿಯಾ ಸಮುದಾಯದವರೇ ಆಗಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!