Friday, September 29, 2023

Latest Posts

ASIA CUP 2023 | ಇಂದು ಪಾಕಿಸ್ತಾನ-ಶ್ರೀಲಂಕಾ ಮ್ಯಾಚ್, ಗೆದ್ದ ಟೀಂ ಫೈನಲ್ಸ್‌ಗೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯಾಕಪ್ ಟೂರ್ನಿ ರೋಚಕ ಹಂತಕ್ಕೆ ತಲುಪಿದ್ದು, ಇಂದು ಪಾಕಿಸ್ತಾನ ಹಾಗೂ ಶ್ರೀಲಂಕಾ ಮುಖಾಮುಖಿಯಾಗಲಿವೆ.
ಉಭಯ ತಂಡಗಳಿಗೆ ಈ ಪಂದ್ಯ ಮುಖ್ಯವಾಗಿದ್ದು, ಗೆದ್ದ ತಂಡ ಫೈನಲ್ಸ್‌ಗೆ ಲಗ್ಗೆ ಇಡಲಿದೆ.

ಇಂದು ಕೊಲಂಬೊದಲ್ಲಿ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಆದರೆ ಈ ಪಂದ್ಯಕ್ಕೂ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ. ಈ ಪಂದ್ಯಕ್ಕೆ ಮಳೆ ಅಡ್ಡಿಯಾಗಿ ಪಂದ್ಯ ನಡೆಯದಿದ್ದರೆ, ಶ್ರೀಲಂಕಾ ಫೈನಲ್ಸ್ ತಲುಪುತ್ತದೆ.

ಹೌದು, ಈ ಪಂದ್ಯಕ್ಕೆ ಮೀಸಲು ದಿನ ಇಲ್ಲ, ಹೀಗಾಗಿ ಎರಡೂ ತಂಡಕ್ಕೂ ಒಂದೊಂದು ಅಂಕ ಸಿಗುತ್ತದೆ. ರನ್‌ರೇಟ್ ಆಧಾರದ ಮೇಲೆ ಒಂದು ತಂಡ ಫೈನಲ್‌ಗೆ ಬರುತ್ತದೆ. ಭಾರತದ ವಿರುದ್ಧ ಹೀನಾಯ ಸೋಲು ಕಂಡ ಪಾಕಿಸ್ತಾನದ ರನ್‌ರೇಟ್ ಕುಸಿದಿದ್ದು, ಶ್ರೀಲಂಕಾ ಫೈನಲ್ಸ್‌ಗೆ ಪ್ರವೇಶ ಮಾಡಲಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!