ಪಾಕ್ ಭಾರತದ ಮೇಲಿನ ದಾಳಿಯಲ್ಲಿ 300-400 ಡ್ರೋನ್‌ ಬಳಕೆ: ವಿದೇಶಾಂಗ ಇಲಾಖೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಡ್ರೋನ್ ದಾಳಿಯ ಕುರಿತು ವಿದೇಶಾಂಗ ಸಚಿವಾಲಯ ಹಾಗೂ ಭಾರತೀಯ ಸೇನೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದೆ.

ಪತ್ರಿಕಾಗೋಷ್ಠಿಯಲ್ಲಿ ವಿಂಗ್‌ ಕಮಾಂಡರ್‌ ವ್ಯೋಮಿಕಾ ಸಿಂಗ್‌, ಕರ್ನಲ್‌ ಸೋಫಿಯಾ ಖುರೀಷಿ, ಹಾಗೂ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿಕ್ರಮ ಮಿಸ್ರಿ ಮಾಹಿತಿಯನ್ನು ನೀಡಿದ್ದಾರೆ.

ಮೊದಲು ಮಾತನಾಡಿದ ಸೋಫಿಯಾ ಖುರೇಷಿ ಪಾಕಿಸ್ತಾನ ಮೇ 8-9 ಕ್ಕೆ ಭಾರತದ ನಾಗರಿಕ ಹಾಗೂ ಸೇನಾ ನೆಲೆಗಳ ಮೇಲೆ ದಾಳಿಗೆ ಯತ್ನಿಸಿತ್ತು. ಅದಕ್ಕೆ ಭಾರತ ಪ್ರತ್ಯುತ್ತರ ನೀಡಿದೆ. ನಮ್ಮ ರಕ್ಷಣೆಗಾಗಿ ಭಾರತ ಪಾಕಿಸ್ತಾನದ 36 ಕಡೆ ದಾಳಿ ನಡೆಸಿದೆ. ಎಲ್‌ಒಸಿಯಲ್ಲಿ ಪಾಕಿಸ್ತಾನ ಕದನ ವಿರಾಮ ಉಲ್ಲಂಘನೆ ಮಾಡಿ ಅಪ್ರಚೋದಿತ ಗುಂಡಿನ ದಾಳಿ ನಡಸಿದ್ದು, ಭಾರತೀಯ ಸೇನೆಯ ಯೋಧ ಹುತಾತ್ಮರಾಗಿದ್ದಾರೆ ಹಾಗೂ ಹಲವು ಸೈನಿಕರಿಗೆ ಗಾಯಗಳಾಗಿವೆ ಎಂದು ಹೇಳಿದ್ದಾರೆ.

36 ಸ್ಥಳಗಳಲ್ಲಿ ಒಳನುಸುಳುವಿಕೆಗೆ ಪ್ರಯತ್ನಿಸಲು ಸುಮಾರು 300 ರಿಂದ 400 ಡ್ರೋನ್‌ಗಳನ್ನು ಬಳಸಲಾಗಿದೆ. ಅದನ್ನು ಯಶಸ್ವಿಯಾಗಿ ತಡೆದಿದ್ದೇವೆ. ಲೇಹ್‌ನಿಂದ ಸಿರ್‌ ಸೆಕ್ಟರ್‌ವರೆಗೆ ಪಾಕಿಸ್ತಾನಿ ಸೇನೆಯು ಒಳನುಸುಳುವಿಕೆಗಾಗಿ ಡ್ರೋನ್‌ಗಳನ್ನು ಬಳಸಿದೆಎಂದು ಕರ್ನಲ್ ಖುರೇಷಿ ಹೇಳಿದ್ದಾರೆ.

ಪಾಕಿಸ್ತಾನದ ದಾಳಿಗೆ ಪ್ರತಿಕ್ರಿಯೆಯಾಗಿ 4 ಪಾಕಿಸ್ತಾನಿ ಮಿಲಿಟರಿ ಸ್ಥಾಪನೆಗಳ ವಿರುದ್ಧ ಡ್ರೋನ್‌ಗಳನ್ನು ಹಾರಿಸಲಾಯಿತು. ಈ ಡ್ರೋನ್‌ಗಳಲ್ಲಿ ಒಂದು ಎಡಿ (ವಾಯು ರಕ್ಷಣಾ) ರಾಡಾರ್ ಅನ್ನು ನಾಶಮಾಡಲು ಸಾಧ್ಯವಾಯಿತು. ಆದರೆ, ಪಾಕಿಸ್ತಾನವು ಜಮ್ಮು ಮತ್ತು ಕಾಶ್ಮೀರದ ಉರಿ, ಪೂಂಚ್, ರಾಜೌರಿ, ಅಖ್ನೂರ್ ಇತ್ಯಾದಿಗಳಲ್ಲಿ ದಾಳಿ ನಡೆಸಲು ಭಾರೀ ಫಿರಂಗಿ ಮತ್ತು ಡ್ರೋನ್‌ಗಳನ್ನು ಬಳಸಿತು ಎಂದು ಸೋಫಿಯಾ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!