ಪಾಕ್ ಭಾರತದೊಂದಿಗೆ ವಿಲೀನವಾಗುತ್ತೆ ಇಲ್ಲವೇ ಶಾಶ್ವತವಾಗಿ ಅಸ್ತಿತ್ವದಲ್ಲಿ ಇರಲ್ಲ: ಯೋಗಿ ಆದಿತ್ಯಾನಾಥ್‌

ಹೊಸ ದಿಗಂತ ಡಿಜಿಟಲ್ ಡೆಸ್ಕ್: 

ಭಯೋತ್ಪಾದನೆಯ ರೂಪದಲ್ಲಿ ಇಂದಿಗೂ ಕಾಟ ಎದುರಿಸುತ್ತಿರುವ ಭಾರತಕ್ಕೆ ಕಾಂಗ್ರೆಸ್‌ ಪಕ್ಷ ಗಾಯವನ್ನುಂಟು ಮಾಡಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯಾನಾಥ್‌ ಎಂದು ವಾಗ್ದಾಳಿ ನಡೆಸಿದ್ದಾರೆ.

ಲಖನೌದಲ್ಲಿ ದೇಶ ವಿಭಜನೆ ಕರಾಳ ದಿನ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು.

1947 ರಲ್ಲಿ ಪಾಕಿಸ್ತಾನದಲ್ಲಿ ನಡೆದಿದ್ದು, ಈಗ ಬಾಂಗ್ಲಾದೇಶದಲ್ಲಿ ನಡೆಯುತ್ತಿದೆ. ನಮ್ಮ ಸಹೋದರಿಯರು ಮತ್ತು ಹೆಣ್ಣುಮಕ್ಕಳು ದೌರ್ಜನ್ಯವನ್ನು ಎದುರಿಸುತ್ತಿದ್ದಾರೆ. ಆದರೆ ರಾಜಕೀಯ ಹಿತಾಸಕ್ತಿಗಳಿಂದಾಗಿ, ಭಾರತದಲ್ಲಿ ಕೆಲವರು ಮೌನ ವಹಿಸುತ್ತಿದ್ದಾರೆ. 1947ರಲ್ಲಿ ಪಾಕಿಸ್ತಾನದಲ್ಲಿ ಮಿಲಿಯನ್ ಹಿಂದುಗಳು ಮತ್ತು ಸಿಖ್ಖರನ್ನು ಕಗ್ಗೊಲೆ ಮಾಡಲಾಯಿತು. ಇಂದಿಗೂ ನಮ್ಮ ಅಕ್ಕ-ತಂಗಿಯರ ಮೇಲೆ ಅದೇ ರೀತಿಯ ಅತ್ಯಾಚಾರ, ಲೂಟಿ, ದೌರ್ಜನ್ಯಗಳು ನಡೆಯುತ್ತಿವೆ. ಅದೇ ರೀತಿಯ ದುರಂತ ಇಂದಿಗೂ ತೆರೆದುಕೊಳ್ಳುತ್ತಿದೆ. ಬಾಂಗ್ಲಾದೇಶದ 15 ಮಿಲಿಯನ್ ಹಿಂದುಗಳು ತಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳಲು ಹತಾಶವಾಗಿ ಪ್ರಯತ್ನಿಸುತ್ತಿದ್ದಾರೆ ಎಂದು ಸಿಎಂ ಯೋಗಿ ಹೇಳಿದರು.

ಭಾರತದ ‘ಜಾತ್ಯತೀತ ಜನರು’ ತಮ್ಮ ಮತ ಬ್ಯಾಂಕ್ ಕಳೆದುಕೊಳ್ಳುವ ಭಯದಿಂದ ಈ ವಿಷಯದ ಬಗ್ಗೆ ಮೌನವಾಗಿದ್ದಾರೆ. ಇಂದು ಭಾರತದಲ್ಲಿ ಜಾತ್ಯತೀತ ಜನರ ಬಾಯಿ ಮುಚ್ಚಿದೆ. ದುರ್ಬಲರ ಪರವಾಗಿ ಮಾತನಾಡಿದರೆ ತಮ್ಮ ವೋಟ್ ಬ್ಯಾಂಕ್ ಅನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ಹೆದರುತ್ತಾರೆ, ಅವರು ತಮ್ಮ ಮತಬ್ಯಾಂಕ್ ಬಗ್ಗೆ ಕಾಳಜಿ ಹೊಂದಿದ್ದಾರೆ, ಆದರೆ ಅವರ ಮಾನವ ಸಂವೇದನೆ ಸತ್ತಿದೆ. ಪಾಕಿಸ್ತಾನವು ಭಾರತದೊಂದಿಗೆ ವಿಲೀನಗೊಳ್ಳುತ್ತದೆ ಅಥವಾ ಅದು ಶಾಶ್ವತವಾಗಿ ಅಸ್ತಿತ್ವದಲ್ಲಿ ಇರುವುದಿಲ್ಲ ಎಂಬ ವಾರ್ಸಿ ಅರವಿಂದ್ ಅವರ 1947 ರ ಭವಿಷ್ಯ ನಿಜವಾಗಲಿದೆ ಎಂದು ಅವರು ಹೇಳಿದರು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!