Sunday, October 1, 2023

Latest Posts

ಚಂದ್ರಯಾನ-3 ಯಶಸ್ಸಿಗೆ ಉಪವಾಸ ಕುಳಿತ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್!

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಚಂದ್ರಯಾನ-3 (Chandrayaan-3) ಇನ್ನು ಕೆಲವೇ ಕ್ಷಣದಲ್ಲಿ ಚಂದ್ರನ ಮೇಲೆ ಇಳಿಯಲಿದೆ. ಇತ್ತ ಇಡೀ ವಿಶ್ವವೇ ಕಾತುರದಿಂದ ಕಾಯುತ್ತಿದೆ.

ದೇಶದೆಲ್ಲೆಡೆ ಇಸ್ರೋ ವಿಜ್ಞಾನಿಗಳ ಪ್ರಯತ್ನ ಫಲಿಸಲು ಪೂಜೆ, ಪ್ರಾರ್ಥನೆಗಳು ನಡೆಯುತ್ತಿದೆ. ಧರ್ಮ ಭೇದಗಳಿಲ್ಲದೆ, ಎಲ್ಲರೂ ಕೂಡ ಚಂದ್ರಯಾನ-3 ಯಶಸ್ಸಿಗೆ ಬೇಡಿಕೊಳ್ಳುತ್ತಿದ್ದಾರೆ.

ಇದರ ನಡುವೆ ಅಕ್ರಮವಾಗಿ ಭಾರತ ಪ್ರವೇಶಿಸಿದ ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ (Seema Haider) ಚಂದ್ರಯಾನ-3 ಯಶಸ್ಸಿಗೆ ಉಪವಾಸ ಮಾಡುವ ಮೂಲಕ ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾರೆ.

ಪಬ್ ಜೀ ಮೂಲಕ ಪ್ರೀತಿಯಾಗಿ ಸಚಿನ್ ಮೀನಾ ಅವರೊಂದಿಗೆ ನೋಯ್ಡಾದಲ್ಲಿ ವಾಸಿಸುತ್ತಿರುವ ಸೀಮಾ ಹೈದರ್ ಅವರು ಚಂದ್ರಯಾನ -3ರ ಯಶಸ್ವಿ ಲ್ಯಾಂಡಿಂಗ್‌ಗಾಗಿ ಉಪವಾಸವನ್ನು ಆಚರಿಸುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ.

ಚಂದ್ರಯಾನ-3 ಚಂದ್ರನ ಮೇಲ್ಮೈಯಲ್ಲಿ ವಿಜಯ ಸಾಧಿಸುವವರೆಗೆ ತಾನು ಉಪವಾಸವನ್ನು ಮುಂದುವರೆಸುತ್ತೇನೆ ಎಂದು ಅವರು ಹೇಳಿದ್ದಾರೆ. ಇದೀಗ ಈ ವೀಡಿಯೊ ವೈರಲ್ ಆಗಿದ್ದು, ಎಲ್ಲ ಕಡೆದ ಈ ಸುದ್ದಿ ಟ್ರೆಂಡಿಂಗ್ ಆಗುತ್ತಿದೆ.

ವೀಡಿಯೊದಲ್ಲಿ, ಸೀಮಾ ಹೈದರ್ ಹಿಂದು ದೇವತೆಗಳ ವಿಗ್ರಹಗಳ ಮುಂದೆ ಗೌರವದಿಂದ ಪ್ರಾರ್ಥನೆ ಮಾಡುತ್ತಿದ್ದು, ‘ನನ್ನ ಆರೋಗ್ಯ ಸ್ಥಿತಿ ಸರಿ ಇಲ್ಲದಿದ್ದರು. ಚಂದ್ರಯಾನ -3ರ ಯಶಸ್ವಿ ಲ್ಯಾಂಡಿಂಗ್ ಆಗುವಂತೆ ನಾನು ಉಪವಾಸವನ್ನು ಆಚರಿಸುತ್ತಿದ್ದೇನೆ. ಈ ಸಾಧನೆಯು ಭಾರತದ ಭವಿಷ್ಯಕ್ಕೆ ದೊಡ್ಡ ಭರವಸೆ. ನನ್ನ ಈ ಉಪವಾಸ ಚಂದ್ರಯಾನ 3 ಯಶಸ್ವಿ ಆಗುವವರೆಗೆ ನಾನು ಮುಂದುವರಿಸುವೇ ಎಂದು ಹೇಳಿದ್ದಾರೆ. ಇನ್ನು ನಾನು ನಂಬಿರುವ ರಾಧೆ ಕೃಷ್ಣ, ಶ್ರೀರಾಮ ಖಂಡಿತ ನನ್ನ ಉಪವಾಸಕ್ಕೆ ಫಲ ನೀಡುತ್ತಾರೆ ಎಂದು ಹೇಳಿದ್ದಾರೆ.

ನಮ್ಮ ಪ್ರಧಾನಿಯವರು ಈ ಯೋಜನೆಗಾಗಿ ಶ್ರಮಿಸಿದ್ದಾರೆ. ಚಂದ್ರಯಾನದ ಯಶಸ್ವಿ ಲ್ಯಾಂಡಿಂಗ್​​ನಿಂದ ಜಾಗತಿಕವಾಗಿ ಭಾರತದ ಮಹತ್ವ ಸಾಧನೆಗೆ ಸಾಕ್ಷಿಯಾಗಲಿದೆ ಎಂದು ಹೇಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!