Saturday, December 9, 2023

Latest Posts

ಭಾರತದಲ್ಲಿ ಸಿಕ್ಕ ಭವ್ಯ ಆತಿಥ್ಯಕ್ಕೆ ಮಾರುಹೋದ ಪಾಕ್ ಕ್ರಿಕೆಟಿಗರು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತದಲ್ಲಿ ನಡೆಯುವ ಏಕದಿನ ವಿಶ್ವಕಪ್‌ಗಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಬಂದಿದೆ.
ಈಗಾಗಲೇ ಪಾಕ್ ತಂಡ ಹೈದರಾಬಾದ್‌ಗೆ ತಲುಪಿದ್ದು, ಭಾರತದಲ್ಲಿ ಸಿಕ್ಕ ಭವ್ಯ ಸ್ವಾಗತಕ್ಕೆ ಮನಸೋತಿದ್ದಾರೆ.

ಬಾಬರ್ ಆಝಂ ನೇತೃತ್ವದ ತಂಡ ಹೈದರಾಬಾದ್ ಏರ್‌ಪೋರ್ಟ್‌ಗೆ ಬಂದಿಳಿಯುತ್ತಿದ್ದಂತೆಯೇ ಕೇಸರಿ ಶಾಲು ಹೊದಿಸಿ ಮನಃಪೂರ್ತಿಯಾಗಿ ಸ್ವಾಗತ ಮಾಡಲಾಗಿದೆ.

ಭಾರತದ ಈ ಆತಿಥ್ಯಕ್ಕೆ ಆಟಗಾರರು ಮನಸೋತಿದ್ದು, ತಮ್ಮ ಸಾಮಾಜಿಕ ಜಾಲತಾಣಗಳ ಅಕೌಂಟ್‌ನಲ್ಲಿ ಭಾರತವನ್ನು ಹಾಡಿ ಹೊಗಳಿದ್ದಾರೆ. ಏಳು ವರ್ಷಗಳ ನಂತರ ಟೀಂ ಪಾಕ್ ಭಾರತಕ್ಕೆ ಬಂದಿದ್ದು, ಅದ್ಭುತ ಅನುಭವ ಎಂದು ಹೊಗಳಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!