10 ವರ್ಷದಿಂದ ಭಾರತದ ಜೈಲಿನಲ್ಲಿದ್ದ ಪಾಕಿಸ್ತಾನಿ ನುಸುಳುಕೋರನಿಗೆ ಬಿಡುಗಡೆ ಭಾಗ್ಯ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಅಕ್ರಮವಾಗಿ ಭಾರತವನ್ನು ಪ್ರವೇಶಿಸಿದ್ದ ಪಾಕಿಸ್ತಾನಿ ಪ್ರಜೆ ಇಲ್ಲಿ ನಿಗದಿತ 10 ವರ್ಷಗಳ ಜೈಲು ಶಿಕ್ಷೆಯನ್ನು ಪೂರ್ಣಗೊಳಿಸಿದ ಹಿನ್ನೆಲೆಯಲ್ಲಿ ಮಂಗಳವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ವಾಪಸ್ ಕಳುಹಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪಾಕಿಸ್ತಾನದ ನರೋವಾಲ್ ಪ್ರದೇಶಕ್ಕೆ ಸೇರಿದ ಕಲಾ ಮಾಸ್ಸಿ ಜೈಲು ಶಿಕ್ಷೆಯ ಅವಧಿ ಮುಗಿದ ನಂತರ ಜೈಲಿನಿಂದ ಬಿಡುಗಡೆಗೊಂಡಿದ್ದಾನೆ. ಮಾಸ್ಸಿ 2011 ರಲ್ಲಿ ಪಾಸ್‌ಪೋರ್ಟ್ ಮತ್ತು ವೀಸಾ ಇಲ್ಲದೆ ರಾಮದಾಸ್ ಪ್ರದೇಶದ ಮೂಲಕ ಭಾರತವನ್ನು ಪ್ರವೇಶಿಸಿದ್ದ. ಆ ಬಳಿಕ ಪಂಜಾಬ್  ನ ಮಜಿತಾ ಪ್ರದೇಶದಲ್ಲಿ ಪಿಸ್ತೂಲ್ ಮತ್ತು ಗುಂಡುಗಳೊಂದಿಗೆ ಸಿಕ್ಕಿಬಿದ್ದಿದ್ದ. ನ್ಯಾಯಾಲಯವು ಆತನಿಗೆ 10 ವರ್ಷಗಳ ಜೈಲು ಶಿಕ್ಷೆ ಮತ್ತು ₹ 2,10,000 ದಂಡ ವಿಧಿಸಿತ್ತು ಎಂದು ಭಾರತೀಯ ಅಧಿಕಾರಿ ಸಿಂಗ್ ಹೇಳಿದ್ದಾರೆ. “ಕಾಲಾ ಮಾಸ್ಸಿಯನ್ನು ಸದ್ಯ ಪಾಕಿಸ್ತಾನಕ್ಕೆ ಕಳುಹಿಸಲಾಗುತ್ತಿದೆ. ಆತನಿಂದ ಯಾವುದೇ ದಂಡ ವಶಪಡಿಸಿಕೊಂಡಿಲ್ಲ” ಎಂದು ಅಧಿಕಾರಿ ಹೇಳಿದರು.
ತಾನು ಕಳ್ಳಸಾಗಣೆಯಲ್ಲಿ ತೊಡಗಿದ್ದು, ಈ ಹಿಂದೆ ಕೆಲವು ಬಾರಿ ಭಾರತಕ್ಕೆ ಬಂದಿದ್ದೆ. ನನ್ನ ಜೊತೆಗಿದ್ದ ಫೈಸಲ್ ಶೇಖ್ ಎಂಬ ವ್ಯಕ್ತಿ ನನ್ನನ್ನು ಭಾರತಕ್ಕೆ ಕಳುಹಿಸುತ್ತಿದ್ದ ಎಂದು ಕಲಾ ಮಾಸ್ಸಿ ಹೇಳಿದ್ದಾನೆ. ಜುಲೈನಲ್ಲಿ ಅಮೃತಸರದ ಅಟ್ಟಾರಿ-ವಾಘಾ ಗಡಿಯ ಮೂಲಕ ಇಲ್ಲಿ ಜೈಲುವಾಸವನ್ನು ಪೂರ್ಣಗೊಳಿಸಿದ ನಾಲ್ವರು ಪಾಕಿಸ್ತಾನಿ ಕೈದಿಗಳನ್ನು ಭಾರತ ವಾಪಸ್ ಕಳುಹಿಸಿತ್ತು ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!