ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಾಕಿಸ್ತಾನದಲ್ಲಿ ಆರ್ಥಿಕತೆ ಸಂಪೂರ್ಣವಾಗಿ ನೆಲಕಚ್ಚಿದೆ. ನಮ್ಮ ಮನೆಯಲ್ಲಿ ಕಳೆದ 6 ತಿಂಗಳಿಂದ ಸಿಲಿಂಡರ್ ಇಲ್ಲ ಎಂದು ಪಾಕ್ ಪತ್ರಕರ್ತ ಅಹ್ಮದ್ ರಶೀದ್ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ದೇಶ ಮುನ್ನಡೆಯಲು ಯಾರೂ ಕೂಡ ಹೂಡಿಕೆ ಮಾಡಲು ಮುಂದೆಬರುತ್ತಿಲ್ಲ. ಮೊದಲಿನಿಂದಲೂ ಪಾಕಿಸ್ತಾನಕ್ಕೆ ಬರುವ ಹಣವೆಲ್ಲಾ ಮಿಲಿಟರಿ ಹಾಗೂ ಶಸ್ತ್ರಾಸ್ತ್ರಗಳು, ನ್ಯೂಕ್ಲಿಯರ್ ಬಾಂಬ್ ತಯಾರಿಕೆಗೆ ಖರ್ಚಾಗುತ್ತಿದೆ. ನಮಗೆ ಪ್ರತಿದಿನ 12 ಗಂಟೆಗಳ ಕಾಲ ಮಾತ್ರ ವಿದ್ಯುತ್ ಸಿಗುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳಿಗೂ ಹಣವಿಲ್ಲ ಎಂದು ಪಾಕ್ ಪತ್ರಕರ್ತ ಪರಿಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ.